Headlines

ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆ: ಬಲಪ್ರಯೋಗದ ಆರೋಪವನ್ನು ತಳ್ಳಿಹಾಕಿದ ದೆಹಲಿ ಪೊಲೀಸ್ – Kannada News | Delhi students protest, police rejects claims of using excessive force to stop protestors

ಜಂತರ್ ಮಂತರ್ ಪ್ರತಿಭಟನೆImage Credit source: PTI

ನವದೆಹಲಿ, ಆಗಸ್ಟ್ 18: ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಜಂತರ್ ಮಂತರ್ ಪ್ರತಿಭಟನೆ (Jantar Mantar protests) ವೇಳೆ, ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪವನ್ನು ದೆಹಲಿ ಪೊಲೀಸ್ ಇಲಾಖೆ ಸ್ಪಷ್ಟವಾಗಿ ನಿರಾಕರಿಸಿದೆ. ಘಟನೆ ಕುರಿತು ಕೋರ್ಟ್ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ದೆಹಲಿ ಪೊಲೀಸರು ಸಲ್ಲಿಸಿದ ಅಫಿಡವಿಟ್‌ನಲ್ಲಿ, ತಾವು ಯಾವುದೇ ಅತಿಯಾದ ಬಲಪ್ರಯೋಗ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಗುಂಪು ಬ್ಯಾರಿಕೇಡ್‌ಗಳನ್ನು ದಾಟಿ ಸಂಸತ್ತಿನತ್ತ ಮುನ್ನುಗ್ಗಲು ಪ್ರಯತ್ನಿಸಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ವಾದಿಸಿದ್ದಾರೆ. ಸಂಸತ್ತಿನತ್ತ ಸಾಗುವ ಈ ಪ್ರತಿಭಟನಾ ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ, ಆದ್ದರಿಂದ ಈ ಗುಂಪು ಅಕ್ರಮವಾಗಿ ಸೇರಿದ್ದಾಗಿತ್ತು ಎಂದು ಪೊಲೀಸರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮರಣದಂಡನೆ ಶಿಕ್ಷೆ ಜಾರಿ ಹೇಗೆ ಇರಲಿ? ಇಂಜೆಕ್ಷನ್, ಶೂಟ್, ಗ್ಯಾಸ್ ವಿಧಾನ ಬೇಡ, ಗಲ್ಲಿಗೇರಿಸುವ ಪದ್ಧತಿಯೇ ಇರಲಿ ಎಂದ ಸುಪ್ರೀಂ

‘ಘರ್ಷಣೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದವು’

ಪರಿಸ್ಥಿತಿ ನಿಯಂತ್ರಣ ಮೀರಿ ಹೋದಾಗ ನಡೆದ ಘರ್ಷಣೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರು ಇಬ್ಬರೂ ಗಾಯಗೊಂಡಿದ್ದಾರೆ. ಸುಮಾರು 240ಕ್ಕೂ ಹೆಚ್ಚು ಪೊಲೀಸರು ಮತ್ತು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ವೈರಲ್ ವಿಡಿಯೋ ಕ್ಲಿಪ್‌ಗಳ ಕುರಿತು: ಪ್ರತಿಭಟನೆಯಲ್ಲಿ ಪೊಲೀಸರು ಮೊಳೆಗಳಿರುವ ಲಾಠಿಗಳನ್ನು ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ವಿಡಿಯೋದಲ್ಲಿ ಕಂಡುಬಂದ ಅಂತಹ ವಸ್ತುಗಳು ಪ್ರತಿಭಟನಾಕಾರರ ಕೈಯಲ್ಲಿದ್ದ ಬೊಂಬೆಗಳು ಅಥವಾ ಧ್ವಜ ಹಿಡಿಯುವ ಕಡ್ಡಿಗಳಾಗಿದ್ದವು, ಪೊಲೀಸರ ಬಳಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ಕ್ರಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಏಕಪಕ್ಷೀಯವಾಗಿವೆ ಮತ್ತು ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ ಎಂದು ಪೊಲೀಸರು ತಮ್ಮ ವಾದದಲ್ಲಿ ಮಂಡಿಸಿದ್ದಾರೆ.

ಇದನ್ನೂ ಓದಿ: ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

ಈ ಪ್ರಕರಣದಲ್ಲಿ ಪೊಲೀಸರು ಕಾನೂನಿನ ಚೌಕಟ್ಟಿನೊಳಗೆಯೇ ವರ್ತಿಸಿದ್ದಾರೆ ಮತ್ತು ಯಾವುದೇ ನಿಯಮಬಾಹಿರ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸ್ ಇಲಾಖೆ ತನ್ನ ಅಫಿಡವಿಟ್ ಮೂಲಕ ಸಮರ್ಥಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *