Headlines

ದಕ್ಷಿಣ ಆಫ್ರಿಕಾವನ್ನು 6-1 ಗೋಲುಗಳಿಂದ ಮಣಿಸಿದ ಭಾರತ ಮಹಿಳಾ ತಂಡ | India Women’s Hockey Crushes South Africa 6 1 in FIH World Cup for First Win, Tops Pool D

ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ( FIH World Cup) ಭಾರತ ಮಹಿಳಾ ಹಾಕಿ ತಂಡ (Indian Women’s Hockey Team) ದಕ್ಷಿಣ ಆಫ್ರಿಕಾವನ್ನು 6-1 ಅಂತರದಿಂದ ಸೋಲಿಸಿ ಈ ವಿಶ್ವಕಪ್​ನಲ್ಲಿ ಮೊದಲ ಜಯ ದಾಖಲಿಸಿದೆ. ಆಮ್ಸ್ಟೆಲ್ವೀನ್‌ನ ವ್ಯಾಗ್ನರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪೂಲ್ ಡಿ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ತಂಡದ ಪರ ಸುನೆಲಿತಾ ಟೊಪ್ಪೊ, ನವನೀತ್ ಕೌರ್, ಸುಶೀಲಾ ಚಾನು, ದೀಪಿಕಾ, ಲಾಲ್ರೆಮ್ಸಿಯಾಮಿ ಮತ್ತು ಸಾಕ್ಷಿ ರಾಣಾ ಗೋಲು ಬಾರಿಸುವ ಮೂಲಕ ಭಾರತಕ್ಕೆ ಅತಿದೊಡ್ಡ ವಿಶ್ವಕಪ್ ಜಯ ತಂದುಕೊಟ್ಟರು.

ಭಾರತ ಮಹಿಳಾ ತಂಡದ ಮೊದಲ ಗೆಲುವು

ಮೇಲೆ ಹೇಳಿದಂತೆ ಈ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡದ ಮೊದಲ ಗೆಲುವು ಇದಾಗಿದೆ. ಇದಕ್ಕೂ ಮೊದಲು, ಭಾರತ ತಂಡವು ಚೀನಾ ವಿರುದ್ಧದ ತನ್ನ ಮೊದಲ ಪಂದ್ಯವನ್ನು 2-2 ಗೋಲುಗಳ ಅಂತರದಿಂದ ಡ್ರಾ ಮಾಡಿಕೊಂಡಿತ್ತು. ಈ ಅದ್ಭುತ ಗೆಲುವಿನೊಂದಿಗೆ, ಭಾರತವು ಈಗ ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ನಾಲ್ಕು ಅಂಕಗಳನ್ನು ಹೊಂದಿದ್ದು, ಪೂಲ್ ಡಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಆರಂಭದಿಂದಲೂ ಭಾರತಕ್ಕೆ ಮುನ್ನಡೆ

ಆಕ್ರಮಣಕಾರಿ ಪ್ರಾರಂಭ ಪಡೆದುಕೊಂಡ ಭಾರತದ ಪರ ಸುನೆಲಿತಾ ಟೊಪ್ಪೊ 10ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್ ಅಂತ್ಯಕ್ಕೆ ಭಾರತ 1-0 ಮುನ್ನಡೆ ಪಡೆದುಕೊಂಡಿತು. ಎರಡನೇ ಕ್ವಾರ್ಟರ್‌ನಲ್ಲಿ ಅದೇ ಆಕ್ರಮಣಕಾರಿ ಆಟವನ್ನು ಮುಂದುವರೆಸಿದ ಭಾರತದ ಪರ 16 ನೇ ನಿಮಿಷದಲ್ಲಿ, ನವನೀತ್ ಕೌರ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆಯನ್ನು ತಂದುಕೊಟ್ಟರು. ನಂತರ 24 ನೇ ನಿಮಿಷದಲ್ಲಿ, ಸುಶೀಲಾ ಚಾನು ಅದ್ಭುತ ಗೋಲು ಗಳಿಸಿ ಮುನ್ನಡೆಯನ್ನು 3-0 ಗೇರಿಸಿದರು.

ಮೂರನೇ ಕ್ವಾರ್ಟರ್‌ನಲ್ಲಿಯೂ ಭಾರತದ ಆಟಗಾರ್ತಿಯರು ಪ್ರಾಬಲ್ಯ ಮುಂದುವರೆಸಿದರು. ದೀಪಿಕಾ 37 ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 4-0ಕ್ಕೆ ಹೆಚ್ಚಿಸಿದರು. ನಂತರ 43 ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ ಗೋಲು ಗಳಿಸಿ 5-0 ಮುನ್ನಡೆ ಸಾಧಿಸಿದರು. ಇದಾದ ಸ್ವಲ್ಪ ಸಮಯದ ನಂತರ, ರಾಣಾ ಸಾಕ್ಷಿ 44 ನೇ ನಿಮಿಷದಲ್ಲಿ ಭಾರತದ ಆರನೇ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್ ಅಂತ್ಯದ ವೇಳೆಗೆ, ಭಾರತ 6-0 ಮುನ್ನಡೆ ಪಡೆದುಕೊಂಡು ಪಂದ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

ಆಗಸ್ಟ್ 19 ರಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಕದನ

ಕೊನೆಯಲ್ಲಿ ಗೋಲು ಬಾರಿಸಿದ ಆಫ್ರಿಕಾ

ಆದಾಗ್ಯೂ, ದಕ್ಷಿಣ ಆಫ್ರಿಕಾ ಅಂತಿಮವಾಗಿ ಭಾರತದ ರಕ್ಷಣೆಯನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಕೈಲಾ ಡಿ ವಾಲ್ 55 ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಖಾತೆ ತೆರೆದರು. ಆ ಬಳಿಕ ಉಭಯ ತಂಡಗಳಿಗೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಪಂದ್ಯವನ್ನು ಭಾರತ ಮಹಿಳಾ ಹಾಕಿ ತಂಡ 6-1 ಅಂತರದಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *