nagaraj11081993

‘ಕೆಡಿ’ ಹಾಡಿಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ

ಖ್ಯಾತ ಗಾಯಕರಾದ ಹನಿ ಸಿಂಗ್ ಮತ್ತು ಬಾದ್‌ಶಾ ಅವರು 2006-07ರಲ್ಲಿ ಜೊತೆಯಾಗಿ ಸಿದ್ಧಪಡಿಸಿದ್ದ ‘ವಾಲ್ಯೂಮ್ 1’ (Volume 1) ವಿವಾದಾತ್ಮಕ ಹಾಡನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಹಾಡು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಗಾಯಕ ಬಾದ್​ಶಾ (Badshah) ಅವರಿಗೆ ಎದುರಾದ ಎರಡನೇ ಕಾನೂನಿನ ಸಂಕಷ್ಟ ಇದಾಗಿದೆ. ಈ ಹಾಡಿನ ಸಾಹಿತ್ಯವು ಕೇವಲ ಆಕ್ಷೇಪಾರ್ಹ ಮಾತ್ರವಲ್ಲ, ಬದಲಿಗೆ ಮಹಿಳೆಯರನ್ನು ಲೈಂಗಿಕ…

Read More

ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಒತ್ತಡ (ಸ್ಟ್ರೆಸ್) ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ, ಸಮಯದ ಕೊರತೆ, ನಿದ್ರೆ ಸರಿಯಾಗಿ ಆಗದಿರುವುದು ಮತ್ತು ವೈಯಕ್ತಿಕ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿರಂತರ ಒತ್ತಡ ದೇಹದ ಒಳಗಿನ ವ್ಯವಸ್ಥೆಗೆ ಅರಿವಿಲ್ಲದಂತೆ ಹಾನಿ ಉಂಟುಮಾಡಿ, ನಿಧಾನವಾಗಿ ಪರಿಣಾಮ ಬೀರುತ್ತದೆ. ಅನೇಕರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಹೆಚ್ಚು ಸ್ಟ್ರೆಸ್‌ನಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ಹದಗೆಟ್ಟು ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದಣಿವು,…

Read More

KKR vs SRH Playing XI: ಟಾಸ್ ಗೆದ್ದ ಕೆಕೆಆರ್; ಎಸ್​ಆರ್​ಎಚ್ ತಂಡದಲ್ಲಿ ಬದಲಾವಣೆ

ಐಪಿಎಲ್ 2026 (IPL 2026) ರ ಆರನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ನಡುವೆ ನಡೆಯುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಸೋತ ಎರಡೂ ತಂಡಗಳು ಒತ್ತಡದಲ್ಲಿವೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತರೆ, ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್​, ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಆದ್ದರಿಂದ, ಈ ಎರಡು ತಂಡಗಳು ತಮ್ಮ ಮೊದಲ ಗೆಲುವನ್ನು ಎದುರು…

Read More

ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!

ಧಾರವಾಡ, ಏಪ್ರಿಲ್​ 02: ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್​ ಸ್ಪರ್ಶಿಸಿ ಗೃಹಿಣಿ ಬಾತ್ರೂಮ್​​ನಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತ ಗೃಹಿಣಿ. ನಿವೇದಿತಾ ನಾಯ್ಕರ್ ಎರಡು ಮಕ್ಕಳ ತಾಯಿ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ನಿವೇದಿತಾ ನಾಯ್ಕರ್​​ ಬಕೆಟ್​​ನಲ್ಲಿ ಕ್ವಾಯಿಲ್ ಮೂಲಕ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್​ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್​ ಸ್ಪರ್ಶದಿಂದ ನಿವೇದಿತಾ…

Read More

ಮೌಂಟ್ ಎವೆರಸ್ಟ್​ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು

ನವದೆಹಲಿ, ಏಪ್ರಿಲ್ 2: ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಶಿಖರದ ಮಾರ್ಗದರ್ಶಕರು ಪರ್ವತಾರೋಹಿಗಳಿಗೆ (climbers) ವಿಷಪ್ರಾಶನ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೌಂಟ್ ಎವರೆಸ್ಟ್ (Mount Everest) ಮಾರ್ಗದರ್ಶಕರು ಪರ್ವತಾರೋಹಿಗಳಿಗೆ ವಿಷದ ಆಹಾರವನ್ನು ನೀಡಿ ಅವರನ್ನು ಅನಾರೋಗ್ಯಕ್ಕೆ ಒಳಪಡಿಸಿದ್ದಾರೆ, ಹೆಲಿಕಾಪ್ಟರ್ ಮೂಲಕ ಅಲ್ಲಿಂದ ತೆರಳಲು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಪ್ರಕರಣದಲ್ಲಿ 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ. 9 ಜನರನ್ನು ಬಂಧಿಸಲಾಗಿದೆ,…

Read More

ಆಯುರ್ವೇದ ಔಷಧಿ ಹೆಸರಲ್ಲಿ ಗೋಧಿ ಹಿಟ್ಟಿನ ಮಾರಾಟ: ದೆಹಲಿ ಮೂಲದ ಆರೋಪಿ ಅರೆಸ್ಟ್​

ತುಮಕೂರು, ಏಪ್ರಿಲ್​​ 02: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮಾಡಿ ತೂಕ ಇಳಿಕೆ ಪೌಡರ್ ಮತ್ತು ಇತರ ಉತ್ಪನ್ನಗಳ ಹೆಸರಲ್ಲಿ ನಕಲಿ ಆಯುರ್ವೇದ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ರಾಕೆಟ್‌ನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ದೆಹಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಸಂಸ್ಥೆಯೊಂದರ ಮಾಲಕರು ತಮ್ಮ ಟ್ರೇಡ್‌ಮಾರ್ಕ್ ದುರುಪಯೋಗವಾಗಿದೆ ಎಂದು 2025ರ ಆಗಸ್ಟ್ 14ರಂದು ನೀಡಿದ್ದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಲಾಗಿತ್ತು ಎನ್ನಲಾಗಿದೆ. ಆರೋಪಿಗಳು ‘RK ಟ್ರೇಡರ್ಸ್’ ಹೆಸರಿನಲ್ಲಿ ಆನ್‌ಲೈನ್ ಮೂಲಕ ಗ್ರಾಹಕರ ಆರೋಗ್ಯಕ್ಕೆ, ವಿಶೇಷವಾಗಿ…

Read More

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ನವದೆಹಲಿ ಏಪ್ರಿಲ್ 2: ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಹೇಳಿದೆ. “ಅಶೋಕ್ ಕುಮಾರ್ ಮಿತ್ತಲ್ ಅವರನ್ನು ರಾಜ್ಯಸಭಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಕುರಿತು ಎಎಪಿ ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ” ಎಂದು ಆಮ್ ಆದ್ಮಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ….

Read More

‘ತಟ್ಟೆ ತೊಳೆದ ಪ್ರಿಯಾಂಕಾ ಚೋಪ್ರಾ’, ‘ಕಸ ಗುಡಿಸಿದ ಜಗ್ಗೇಶ್’ ಒಂದೇ ಅಲ್ಲವೇನು?

ಭಾರತ ಮೂಲದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚೆಗೆ ಅಮೃತಸರ ಗೋಲ್ಡನ್ ಟೆಂಪಲ್​​ನಲ್ಲಿ ಭಕ್ತರು ತಿಂದುಂಡ ತಟ್ಟೆ, ಲೋಟ ತೊಳೆದಿದ್ದು ದೊಡ್ಡ ಸುದ್ದಿಯಾಯ್ತು. ಇದೀಗ ಆ ಸುದ್ದಿಯನ್ನು ಕನ್ನಡದ ಜನಪ್ರಿಯ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಶ್ನೆಯೊಂದನ್ನು ಎತ್ತಿದ್ದಾರೆ. ತಟ್ಟೆ ಲೋಟ ತೊಳೆದ ಪ್ರಿಯಾಂಕಾ ಚೋಪ್ರಾಗೆ ಭೇಷ್ ಎಂದ ರಾಯರ ಮಠದಲ್ಲಿ ಜನ ಕಸ ಗುಡಿಸಿದ ತಮ್ಮನ್ನು ಅಣಕಿಸಿದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು…

Read More

ಏಪ್ರಿಲ್ 10ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ

ಬೆಂಗಳೂರು, ಏಪ್ರಿಲ್ 2: ವಿದ್ಯಾರ್ಥಿ ಜೀವನದಲ್ಲೇ ಸರಿಯಾದ ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಹಾಗು ಬಹಳ ಕಷ್ಟಕರ ಕೆಲಸವೂ ಹೌದು. ಈ ಕಾರ್ಯವನ್ನು ಸುಲಭವಾಗಿಸಬಲ್ಲುದು ಟಿವಿ9 ಕನ್ನಡ ಎಜುಕೇಶ್ ಸಮಿಟ್ 2026 (TV9 Kannada Education Summit). ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ಮಹಾ ಕಾರ್ಯಕ್ರಮ ಶಿಕ್ಷಣದ ಭವಿಷ್ಯ ಹೆಜ್ಜೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅದ್ಭುತವಾದ ವೇದಿಕೆ ಇದಾಗಿದೆ. ನಿಮ್ಮ ಕನಸುಗಳು ತೆರೆಯಲು…

Read More

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಜಸ್ಟ್ 9 ಸೆಕೆಂಡುಗಳಲ್ಲಿ ಈ ಗಾರ್ಡನ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬ್ರೈನ್ ಟೀಸರ್ ಸೇರಿದಂತೆ ಪಝಲ್‌ಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಇಂತಹ ಒಗಟಿನ ಆಟಗಳು ನಿಮ್ಮ ದೃಷ್ಟಿ ಹಾಗೂ ಬುದ್ಧಿವಂತಿಕೆಗೆ ಸವಾಲು ಎಸೆದು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಇದೀಗ ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಸಮಯ. ಈ ಇಲ್ಯೂಷನ್ ಚಿತ್ರದಲ್ಲಿ ಬಣ್ಣದ ಚಿಟ್ಟೆಯೊಂದಿದೆ. ನೀವು ಒಂಬತ್ತು ಸೆಕೆಂಡುಗಳೊಳಗೆ ಚಿಟ್ಟೆಯನ್ನು ಗುರುತಿಸಬೇಕು. ನೀವು ಈ ಒಗಟು ಬಿಡಿಸಲು ರೆಡಿ ಇದ್ರೆ, ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ. ಈ ಚಿತ್ರ ನೋಡಿದಾಗ ಏನು ಕಾಣಿಸಿತು ?…

Read More