nagaraj11081993

ಗಿಲ್ಲಿ ಬಳಿ ಲವ್​ ಟಿಪ್ಸ್ ಕೇಳಿದ ಅಭಿಮಾನಿ; ನಟನ ಉತ್ತರ ಏನು?

ಗಿಲ್ಲಿ ನಟ ಅವರು ಗೌರಿ ಕಲ್ಯಾಣ ಧಾರಾವಾಹಿಯ ಸೀರಿಯಲ್ ಸಂತೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರ ಬಳಿ ಅಭಿಮಾನಿಗಳು ಲವ್ ಟಿಪ್ಸ್ ಕೇಳಿದ್ದಾರೆ. ಇದಕ್ಕೆ ಗಿಲ್ಲಿ ನಟ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ನೀನು ನನ್ನ ಬಳಿ ಕೇಳಿದ್ದು ತಪ್ಪು’ ಎಂದು ನೇರವಾಗಿ ಹೇಳಿದ್ದಾರೆ. ಆ ಸಂದರ್ಭದ ಫನ್ ಟಾಕ್ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್; ಗಂಡು ಮಗುವಿಗೆ ಜನ್ಮ ನೀಡಿದ ನಟಿ

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಸೋನಂ ಎರಡನೇ ಬಾರಿಗೆ ತಾಯಿ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಮಾರ್​ಚ್​ 29ರಂದು ಮಗು ಜನಿಸಿದೆ. ಈ ಬಗ್ಗೆ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೋನಂ ಕಪೂರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಸೋನಂ ಕುಟುಂಬ ಮತ್ತಷ್ಟು ವಿಸ್ತೃತವಾಗಿದೆ. ಸೋನಂ ಕಪೂರ್ ಅವರು ಇನ್​​ಸ್ಟಾಗ್ರಾಮ್ ಅಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ…

Read More

ರೋಹಿತ್ ಶರ್ಮಾರ ‘ದುರಾದೃಷ್ಟ’ಕ್ಕೆ ಬ್ರೇಕ್ ಹಾಕಿದ ಹಾರ್ದಿಕ್ ಪಾಂಡ್ಯ

IPL 2026: ಬರೋಬ್ಬರಿ 13 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್​ನಲ್ಲಿ ಮೊದಲ ಮ್ಯಾಚ್ ಗೆದ್ದಿದೆ. ಅಂದರೆ ಕಳೆದ ಹದಿಮೂರು ವರ್ಷಗಳಲ್ಲಿ ಮುಂಬೈ ಪಡೆ ತನ್ನ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರಲಿಲ್ಲ. ಇಂತಹದೊಂದು ಅನ್​ಲಕ್ಕಿ ಓಪನಿಂಗ್​​ಗೆ ನಾಂದಿಯಾಡಿದ್ದು ಮಾಜಿ ನಾಯಕ ರೋಹಿತ್ ಶರ್ಮಾ ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿ ಮೊದಲ ಮ್ಯಾಚ್​ ಗೆದ್ದಿದ್ದು 2012 ರಲ್ಲಿ. ಅದು ಸಹ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ. ಇದಾದ ಬಳಿಕ 2013 ರಲ್ಲಿ ರೋಹಿತ್ ಶರ್ಮಾ…

Read More

Bengaluru Air Quality: ಉಡುಪಿ, ಮಂಗಳೂರಿನ ವಾಯುಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಮಾರ್ಚ್​ 30: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ  (Bengaluru Air Quality) ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಬೆಂಗಳೂರಿನ ಏರ್ ಕ್ವಾಲಿಟಿ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. 150ಕ್ಕಿಂತ ಜಾಸ್ತಿಯಿದ್ದ AQI ಕಡುಮೆಯಾಗಿದ್ದರೂ, ಇನ್ನೂ ಗುಣಮಟ್ಟ ಅನಾರೋಗ್ಯಕರವಾಗಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ…

Read More

ಒಮ್ಮೆ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಅಂದ, ಇಂಡಿಗೋ ವಿಮಾನದಲ್ಲಿ 2 ಬಾರಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ

ವಾರಾಣಸಿ, ಮಾರ್ಚ್​ 30: ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ(IndiGo)  ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆರೆಯಲು ಯತ್ನಿಸಿರುವ ಘಟನೆ ನಡೆದಿದೆ. ಒಮ್ಮೆ ವಿಮಾನ ಸಿಬ್ಬಂದಿ ಕೇಳಿದಾಗ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ.6E-185 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹಾರಾಟದ ಸಮಯದಲ್ಲಿ ಎರಡು ಬಾರಿ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ, ಪ್ರಯಾಣಿಕನನ್ನು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ…

Read More

Daily Devotional: ಉಗುರುಗಳಿಗೆ ಈ ಬಣ್ಣ ಹಚ್ಚಿದ್ರೆ ತೊಂದರೆ ತಪ್ಪಿದ್ದಲ್ಲ!

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉಗುರಿಗೆ ಯಾವ ಬಣ್ಣ ಹಚ್ಚಿದ್ರೆ ತೊಂದರೆಯಾಗುತ್ತದೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಗುರುಗಳಿಗೆ ಬಣ್ಣ ಹಚ್ಚುವುದು ಸೌಂದರ್ಯದ ಒಂದು ಭಾಗವಾಗಿದ್ದು, ಇದನ್ನು ನೈಲ್ ಪಾಲಿಶ್ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ಬಣ್ಣಗಳು ನಮ್ಮ ಮಾನಸಿಕ ಸ್ಥಿತಿ ಮತ್ತು ಶುಭ ಫಲಗಳ ಮೇಲೆ ಪರಿಣಾಮ ಬೀರುತ್ತವೆ. ಕೆಂಪು ಬಣ್ಣವು ಮಂಗಳನ ಪ್ರತೀಕವಾಗಿದ್ದು, ಕೋಪ, ಆವೇಶ ಮತ್ತು ಅಹಂಕಾರವನ್ನು ಹೆಚ್ಚಿಸಬಹುದು. ಆದ್ದರಿಂದ, ತಿಳಿ ಕೆಂಪು ಬಣ್ಣಗಳನ್ನು ಬಳಸುವುದು ಉತ್ತಮ….

Read More

‘ಧುರಂಧರ್ 2’ ನಿರ್ದೇಶಕ ಆದಿತ್ಯ ಧಾರ್ ಹಾಗೂ ಪತ್ನಿ ಯಾಮಿ ಪೈಕಿ ಯಾರು ಹೆಚ್ಚು ಶ್ರೀಮಂತರು?

‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ. ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳ ಭಾರಿ ಯಶಸ್ಸಿನ ನಂತರ, ಆದಿತ್ಯ ಅವರ ಸಂಪತ್ತು ಎಷ್ಟು ಎಂಬ ಬಗ್ಗೆ ಚರ್ಚೆ ಆಗಿದೆ. ಅವರ ಪತ್ನಿ ಯಾಮಿ ಗೌತಮ್ ಮತ್ತು ಆದಿತ್ಯ ಅವರ ಒಟ್ಟು ಸಂಪತ್ತಿನ ಬಗ್ಗೆ ಇಲ್ಲಿದೆ ಮಾಹಿತ. ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳ ಭಾರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧಾರ್ ಜನಪ್ರಿಯತೆ ಹೆಚ್ಚಿದೆ. ಆದಿತ್ಯ ಈಗ ಬಾಲಿವುಡ್ ಅಲ್ಲಿ ಬೇಡಿಕೆಯ…

Read More

VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇಂಡಿಯನ್ ಪ್ರೀಮಿಯರ್ ಲೀಗ್​ನ ಎರಡನೇ ಪಂದ್ಯದ ವೇಳೆ ಟಾಸ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಗಂಭೀರ ಆರೋಪ ಮಾಡಿರುವುದು ಮತ್ಯಾರೂ ಅಲ್ಲ, ಐಪಿಎಲ್ ಅಭಿಮಾನಿಗಳು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಕ್ಯಾಮೆರಾದಲ್ಲಿ ಟಾಸ್ ಕಾಯಿನ್ ತೋರಿಸದಿರುವುದೇ ಈ  ಆರೋಪಕ್ಕೆ ಮುಖ್ಯ ಕಾರಣ. ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಗೆಲ್ಲುವುದು ವಾಡಿಕೆ. ಅಂದರೆ ಇಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಇತ್ತ ಮುಂಬೈ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಜೋರಾಯ್ತು ವರುಣಾರ್ಭಟ! ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 30: ಭಾನುವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ  (Weather Forecast)   ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಮೈಸೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಸುರಿದ ಮಳೆಯ ವಿವರ ಬೆಂಗಳೂರು ನಗರ –…

Read More

ಗಂಗಾವತಿಯಲ್ಲಿ ಸೈಕೋ ಕಳ್ಳನ ಹಾವಳಿ: ಮಹಿಳೆಯರ ಒಳ ಉಡುಪುಗಳೇ ಈತನ ಟಾರ್ಗೆಟ್!

ಕೊಪ್ಪಳ, ಮಾರ್ಚ್ 30: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ಬಡಾವಣೆಯಲ್ಲಿ ವಿಚಿತ್ರ ಕಳ್ಳನೊಬ್ಬನ ಹಾವಳಿ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ಮನೆಯ ಗೋಡೆ ಹಾರಿ ಬರುತ್ತಿರುವ ಈ ಖದೀಮ, ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕಳ್ಳತನ ಮಾಡುತ್ತಿದ್ದಾನೆ. ಈತನ ವಿಕೃತ ಚೇಷ್ಟೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More