ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ – Kannada News | Do you know what a husband and wife should be like for a happy married life
ಸಂಸಾರ ಹಾಲು ಜೇನಿನಂತೆ ಇರಲು, ದಾಂಪತ್ಯ ಜೀವನ (married life) ದೀರ್ಘಕಾಲ ಮುಂದುವರೆಯಲು ಸಂಗಾತಿಗಳಿಬ್ಬರಲ್ಲೂ ಹೊಂದಾಣಿಕೆ ಇರಬೇಕು. ಆದರೆ ಇಂದಿನ ಈ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಹೊಂದಾಣಿಕೆ ಎಂಬುದೇ ಇಲ್ಲ. ಈ ಹೊಂದಾಣಿಕೆಯ ಕೊರತೆಯ ಕಾರಣದಿಂದಾಗಿ ಗಂಡ ಹೆಂಡತಿಯ ಮಧ್ಯೆ ಜಗಳಗಳು ನಡೆಯುವುದು, ಡಿವೋರ್ಸ್ ಆಗುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು, ಗಂಡ ಹೆಂಡತಿ ಹೊಂದಾಣಿಕೆಯಿಂದ ಖುಷಿ ಖುಷಿಯಾಗಿ ಸಂಸಾರ ನಡೆಸಲು ಈ ಕೆಲವೊಂದು ಸೂತ್ರಗಳನ್ನು ಪಾಲಿಸಬೇಕು….