ಕೋಲಾರ: SSLC ಪರೀಕ್ಷೆ ಪಾಸ್ ಆದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು – Kannada News | SSLC Result Joy Turns Tragic: Kolar Student Drowns While Swimming
ನೀರುಪಾಲಾದ ಕಿರಣ್Image Credit source: Tv9 Kannada ಕೋಲಾರ, ಏಪ್ರಿಲ್ 23: ಈಜಲು ಹೋಗಿ ನೀರುಪಾಲಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದ್ದು, ತಲಕಾಡು ಬಳಿ ಮೊನ್ನೆ ಮೊನ್ನೆಯಷ್ಟೇ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಮಾಸುವ ಮುನ್ನವೇ ಇತ್ತ ಕೋಲಾರದಲ್ಲಿಯೂ SSLC ಪರೀಕ್ಷೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕನೋರ್ವ ಈಜಲು ಹೋಗಿ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಕಿರಣ್(15) ಮೃತ ಬಾಲಕನಾಗಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈತ ಈಜಲು ತೆರಳಿದ್ದ ವೇಳೆ ಬಾವಿಯ ನೀರಲ್ಲಿ ಮುಳುಗಿ ಅವಘಡ…