ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್‌ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು – Kannada News | India to begin evacuation of Indian citizens stuck in Iran from tomorrow amid protests
ನವದೆಹಲಿ, ಜನವರಿ 15: ವ್ಯಾಪಕ ಪ್ರತಿಭಟನೆಗಳ ಮಧ್ಯೆ ಭಾರತವು ನಾಳೆಯಿಂದ ಇರಾನ್‌ನಲ್ಲಿ (Iran Protest) ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಿದೆ. ಪ್ರತಿಭಟನೆಯಿಂದ ಇರಾನ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ. ಮೂಲಗಳ ಪ್ರಕಾರ, ಸ್ಥಳಾಂತರಿಸುವವರ ಮೊದಲ ಬ್ಯಾಚ್ ಅನ್ನು ನಾಳೆ ಮುಂಜಾನೆಯೇ ವಿಮಾನದಲ್ಲಿ ಕಳುಹಿಸುವ ಸಾಧ್ಯತೆಯಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ, ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್…