ನಾನಾ… ಹೌದು ನೀನೇ… ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ವುಮೆನ್ಸ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲೂ ರಿಟೈರ್ಡ್ ಔಟ್ ಸದ್ದು ಮಾಡಿದೆ. ಈ ಬಾರಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮರಳಿದ್ದು ಹರ್ಲೀನ್ ಡಿಯೋಲ್. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 36 ಎಸೆತಗಳನ್ನು ಎದುರಿಸಿದ ಹರ್ಲೀನ್ 7 ಫೋರ್ಗಳೊಂದಿಗೆ 47 ರನ್…