ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕೋಟ್ಯಂತರ ರೂ ವಂಚನೆ: ಹೆಚ್ಚಿನ ಲಾಭದ ಆಸೆಗೆ ಮೋಸ ಹೋದ ವ್ಯಕ್ತಿ
ಚಿಕ್ಕಮಗಳೂರು, ಮಾರ್ಚ್ 29: ಜಗತ್ತಿನಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ (Fraud) ಮಾಡುವವರು ಇರುತ್ತಾರೆ ಎಂಬ ಮಾತಿಗೆ ಈ ಸ್ಟೋರಿ ಒಂದು ಉದಾಹರಣೆ ಎನ್ನಬಹುದು. ಫೇಸ್ಬುಕ್ ಜಾಹೀರಾತು ನಂಬಿ ಓರ್ವ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕೋಟ್ಯಂತರ ರೂ…