nagaraj11081993

ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು – Kannada News | Bigg Boss Kannada Season 12 Mutant Raghu wants to make videos on his BBK 12 journey

ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಅಂತಿಮ ಹಂತದ ತನಕ ಅವರು ಸಾಗಿಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಸಾಕಷ್ಟು ಅನುಭವ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಷ್ಟು ಸೀಸನ್​​ಗಳಲ್ಲಿ ಬಂದು ಹೋದ ಎಲ್ಲರ ಬಗ್ಗೆ ನನಗೆ ಗೌರವ ಬಂದಿದೆ. ಇಷ್ಟು ದಿನ ನಾನು ಅವರಿಗೆ ಏನೇನೋ ಹೇಳುತ್ತಿದ್ದೆ. ನನಗೆ ಎಲ್ಲ ಮೌಲ್ಯಗಳು ಅರ್ಥ ಆದವು. ಇಷ್ಟು…

Read More

ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ನೀಡದೆ ಚೊಚ್ಚಲ ವಿಕೆಟ್ ಉರುಳಿಸಿದ ಬೆಲ್ – Kannada News | WPL 2026: Lauren Bell’s RCB Debut Stuns MI Batters in Season Opener

ಮಹಿಳಾ ಪ್ರೀಮಿಯರ್ ಲೀಗ್​ನ 2026 ರ ನಾಲ್ಕನೇ ಸೀಸನ್ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರ್​ಸಿಬಿ ತನ್ನ ಮಾರಕ ದಾಳಿಯ ಮೂಲಕ ಮುಂಬೈ ಬ್ಯಾಟರ್​ಗಳನ್ನು ಕಟ್ಟಿಹಾಕಿದೆ. ಅದರಲ್ಲೂ ಆರ್​​ಸಿಬಿ ಪರ ಚೊಚ್ಚಲ ಡಬ್ಲ್ಯುಪಿಎಲ್ ಪಂದ್ಯವನ್ನಾಡಿದ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್, ಮುಂಬೈ ಆರಂಭಿಕರು ರನ್​ಗಾಗಿ ಪರದಾಡುವಂತೆ ಮಾಡಿದರು….

Read More

ಬೆಂಗಳೂರು: ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿದ್ದ ಡೆಲಿವರಿ ಬಾಯ್ ಅರೆಸ್ಟ್ – Kannada News | West Bengal Man Arrested Who harasses young woman in bengaluru

ಬೆಂಗಳೂರು, (ಜನವರಿ 09): ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದವನನ್ನು ಬೆಂಗಳೂರಿನ (Bengaluru) ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ (West Bengal) ಮೂಲದ ಆರೋಪಿ ಮುನಿರುದ್ದೀನ್ ಖಾನ್ ಬಂಧಿತ ಆರೋಪಿ. ಮನೆಯ ಮುಂದೆ ಬಿದ್ದಿದ್ದ ಬಾಕ್ಸ್‌ನ್ನು ಯುವತಿ ತೆಗೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಯುವಕ ರಸ್ತೆಯಲ್ಲಿ ಬಟ್ಟೆಬಿಚ್ಚಿ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ…

Read More

ಅಮ್ಮನ ಎದೆಹಾಲು ಕುಡಿಯುವಾಗ ಮಗು ಸಾವು! – Kannada News | Newborn Baby dies of suffocation while Breastfeeding in Coimbatore

ಕೊಯಮತ್ತೂರು, ಜನವರಿ 9: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ತಾಯಿಯ ಎದೆ ಹಾಲು ಕುಡಿದ ಹೆಣ್ಣು ಮಗುವೊಂದು (Baby Death) ಕೆಮ್ಮಿನಿಂದಾಗಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದು ಇಡೀ ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ. ಮುರಳಿ ಕೊಯಮತ್ತೂರು ಜಿಲ್ಲೆಯ ರಾಮನಾಥಪುರಂನವರು. ಅವರು ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ವರದಲಕ್ಷ್ಮಿ. ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿತ್ತು. 9 ತಿಂಗಳು ತುಂಬಿದ ಗರ್ಭಿಣಿಯಾಗಿದ್ದ ವರದಲಕ್ಷ್ಮಿಗೆ ಹೆರಿಗೆ ನೋವು ಅನುಭವಿಸಿದ್ದರು. ಇದರ ನಂತರ ವರದಲಕ್ಷ್ಮಿ ಅವರನ್ನು…

Read More

ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ – Kannada News | Does Eating Late Increase Sugar Levels?

ಇಂದಿನ ಒತ್ತಡದ ಜೀವನ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಿದೆ. ಕೆಲಸ, ಅತಿಯಾದ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆಹಾರ ಪದ್ಧತಿಯಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅನೇಕರು ತಡವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದು ಇದನ್ನು ಸಾಮಾನ್ಯ ಅಭ್ಯಾಸವೆಂದು ತಿಳಿದುಕೊಂಡಿದ್ದಾರೆ, ಆದರೆ ಇದರ ಪರಿಣಾಮ ತಕ್ಷಣವೇ ಗಮನಕ್ಕೆ ಬರದಿದ್ದರೂ ಕೂಡ ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ತಡರಾತ್ರಿ ಅಥವಾ ತಡವಾಗಿ ಊಟವನ್ನು (Eating Late) ಮಾಡುವುದರಿಂದ ದೇಹದ ಸಮತೋಲನ ಹಾಳಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ…

Read More

IND vs PAK: ‘ಮೈದಾನದಲ್ಲೇ ಉತ್ತರ ಕೊಡ್ತೀವಿ’; ಟೀಂ ಇಂಡಿಯಾಗೆ ಪಾಕ್ ವೇಗಿ ಎಚ್ಚರಿಕೆ

ಕ್ರಿಕೆಟ್ ಅಂಗಳದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲು ಇನ್ನೊಂದು ತಿಂಗಳು ಬಾಕಿ ಇದೆ. ಆದರೆ ಅದಕ್ಕೂ ಮುನ್ನವೇ ಪಾಕಿಸ್ತಾನ ಆಟಗಾರರು ತಮ್ಮ ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಮಂಡಿಯೂರುವ ಈ ಪಾಕಿಗಳು ಮೈದಾನದ ಹೊರಗೆ ಮಾತ್ರ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ. 2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಪಾಕಿಸ್ತಾನ ತಂಡ ಈ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲವಾದ್ದರಿಂದ ತನ್ನ ಎಲ್ಲಾ…

Read More

ಪಿಎಂ ಶ್ರೀ ಶಾಲಾ ಯೋಜನೆ: ಪ್ರೆಸಿಡೆನ್ಸಿ ವಿವಿಯಲ್ಲಿ ಶಿಕ್ಷಕರಿಗೆ ನಾವೀನ್ಯತೆ, ಉದ್ಯಮಶೀಲತೆ ಶಿಬಿರ – Kannada News | PM SHRI: Bengaluru Teachers Boost Innovation and NEP 2020 Skills at IDE Camp

ಬೆಂಗಳೂರು, ಜನವರಿ 09: ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ‘ಪಿಎಂ ಶ್ರೀ’ ಶಾಲಾ ಯೋಜನೆಯನ್ನು (pm shri scheme) ರೂಪಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಶಿಬಿರ ನಡೆಯುತ್ತಿದೆ. ಶಿಬಿರದ ಮೂರನೇ ದಿನದಂದು ಕೂಡ ಹಲವು ಗಣ್ಯರು ಭಾಗಿಯಾಗಿದ್ದರು. ಡಿಆರ್‌ಡಿಓದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವ್ಯವಸ್ಥೆಗಳ ವಿಶೇಷ ವಿಜ್ಞಾನಿ ಮತ್ತು ಮಹಾನಿರ್ದೇಶಕಿ ಡಾ. ಬಿ. ಕೆ. ದಾಸ್…

Read More

ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು – Kannada News | PM Modi’s AI Vision: Boosting Indian Startups for Global Leadership

ಎಐ ಸ್ಟಾರ್ಟಪ್​ಗಳ ಮುಖಂಡರೊಂದಿಗೆ ಪ್ರಧಾನಿ ಸಂವಾದ ನವದೆಹಲಿ, ಜನವರಿ 9: ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆದ ಎಐ ಸ್ಟಾರ್ಟಪ್​ಗಳ ಸಭೆ, ಅದರಲ್ಲಿ ಭಾಗವಹಿಸಿದವರೆಲ್ಲರ ಹೃದಯ ಹಗುರಾಗಿಸಿದೆ. ಎಐ ವಿಚಾರದಲ್ಲಿ ಪ್ರಧಾನಿ ಹೊಂದಿರುವ ದೃಷ್ಟಿಕೋನ, ನಿಲುವು ಏನು ಎಂಬುದು ಭಾರತೀಯ ಸ್ಟಾರ್ಟಪ್​ಗಳ ಮುಖ್ಯಸ್ಥರ ಅರಿವಿಗೆ ಬಂದಿತ್ತು. ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿಗಳು 12 ಸ್ಟಾರ್ಟಪ್​ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ. ಪ್ರಧಾನಿಯನ್ನು…

Read More

ಬಳ್ಳಾರಿ ಬ್ಯಾನರ್​​ ಗಲಾಟೆ ಕೇಸ್​​ ತನಿಖೆ ಹೊಣೆ ಸಿಐಡಿಗೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ – Kannada News | Ballari Banner Firing Case: CID Probe Ordered by Karnataka Government

ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಗಳೂರು, ಜನವರಿ 09: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನುಸಿಐಡಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡ್ತೇನೆ…

Read More

ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ – Kannada News | 9 killed and 40 injured as bus rolled down into deep gorge in Himachal Pradesh

ಶಿಮ್ಲಾ, ಜನವರಿ 9: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಖಾಸಗಿ ಬಸ್ ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿದೆ. ಇದರ ಪರಿಣಾಮವಾಗಿ 9 ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಶಿಮ್ಲಾದಿಂದ ರಾಜ್‌ಗಢ ಮೂಲಕ ಕುಪ್ವಿಗೆ ತೆರಳುತ್ತಿದ್ದ ಬಸ್ ಹರಿಪುರ್ಧರ್ ಗ್ರಾಮದ ಬಳಿ ರಸ್ತೆಯಿಂದ ಜಾರಿ ಕಣಿವೆಗೆ ಉರುಳಿ ಬಿದ್ದಾಗ ಈ ಅಪಘಾತ (Accident) ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅಪಘಾತದಲ್ಲಿ ಸಾವನ್ನಪ್ಪಿದವರ…

Read More