nagaraj11081993

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪರಿಶೀಲಿಸಲು ಮನವಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆಯೇ ಎಫ್​ಐಆರ್! – Kannada News | FIR Filed Against Bajrang Dal and VHP Activists Seeking Probe Into Alleged Illegal Bangladeshi Migrants in Chikkamagaluru

ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ ಬಜರಂಗದಳ, ವಿಹೆಚ್​ಪಿ ಕಾರ್ಯಕರ್ತರು ಚಿಕ್ಕಮಗಳೂರು, ಜನವರಿ 3: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ ಎಂಬ ಆರೋಪ ಈಗ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂಬಂಧ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಏಕಾಏಕಿ ಅಸ್ಸಾಂ ಕಾರ್ಮಿಕರ ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿ…

Read More

ಕುಡುಕನ ಸ್ಫೂರ್ತಿಯಿಂದ ಹುಟ್ಟಿತು ​​‘ಅಮಲು ಏರಿದೆ’ ಹಾಡು; ಭಟ್ಟರ ಸಾಹಿತ್ಯಕ್ಕೆ ಶರಣ್ ಧ್ವನಿ – Kannada News | Yogaraj Bhat Sharan Amalu Eride Song Hits Big; A Musical Duo’s Success

ಯೋಗರಾಜ್ ಭಟ್ (Yogaraj Bhat) ಹಾಗೂ ಶರಣ್ ಅವರದ್ದು ಹಿಟ್ ಕಾಂಬಿನೇಷನ್. ಈ ಕಾಂಬಿನೇನ್ ಜನಮನ್ನಣೆ ಪಡೆದಿದ್ದು ಹಾಡಿನ ಮೂಲಕ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ, ಯೋಗರಾಜ್ ಭಟ್ ಬರೆದ ಲಿರಿಕ್ಸ್​​ಗೆ ಶರಣ್ ಧ್ವನಿಯಾಗಿದ್ದಾರೆ. ಇವರ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ‘ಎಣ್ಣೆ’ ಹಾಡು ಸಾಕಷ್ಟು ಗಮನ ಸೆಳೆದಿವೆ. ಈಗ ಇವರ ಕಾಂಬಿನೇಷನ್​​ನಲ್ಲಿ ಹೊಸ ವರ್ಷಕ್ಕೆ ‘ಅಮಲು’ ಹಾಡು ರಿಲೀಸ್ ಆಗಿದೆ. ಯೋಗರಾಜ್ ಭಟ್ ಅವರು ಬರೆದ, ‘ನಾವ್ ಮನೆಗ್ ಹೊಗೋದಿಲ್ಲ’, ‘ಖಾಲಿ ಕ್ವಾಟರ್’ ಹಾಡನ್ನು ಯೋಗರಾಜ್…

Read More

ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು ಗೊಳಿಸಿದ ಪಾಲಿಕೆ ಸಿಬ್ಬಂದಿ: ಶಾಮಿಯಾನದಡಿ ಪಾಠ ಕೇಳ್ತಿರೋ ಮಕ್ಕಳು – Kannada News | Davangere Civic Body Evicts Private School Over Illegal Building, Students Forced to Study Under Temporary Canopy

ದಾವಣಗೆರೆ, ಜನವರಿ 3: ಅಕ್ರಮ ಕಟ್ಟಡದ ಹೆಸರಿನಲ್ಲಿ ದಾವಣಗೆರೆಯ ಎಸ್​​ಓಜಿ‌ ಕಾಲೋನಿಯಲ್ಲಿ ಜಿವಿಎಸ್ ‌ಖಾಸಗಿ ಶಾಲೆ ಕಟ್ಟಡವನ್ನು ಪಾಲಿಕೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿದ್ದಾರೆ. ಈ ವಿವಾದಾತ್ಮಕ ತೆರವು ಕಾರ್ಯಾಚರಣೆಯು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದೀಗ ಮಕ್ಕಳು ಶಾಮಿಯಾನದಡಿ ತಮ್ಮ ಪಾಠವನ್ನು ಮುಂದುವರಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಯಾವುದೇ ಪೂರ್ವ ಸೂಚನೆ ಅಥವಾ ಮೌಖಿಕ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಪೋಷಕರು ಮತ್ತು ಶಾಲಾ ಆಡಳಿತ ಆರೋಪಿಸಿದೆ. ಸದ್ಯ ಶಿಕ್ಷಕರು ಮಕ್ಕಳ ಭವಿಷ್ಯಕ್ಕಾಗಿ ಶಾಲೆ ತೆರವುಗೊಳಿಸಿದ ಅದೇ…

Read More

‘ನಾವು ಹೋಗಲು ಬಿಡಲ್ಲ’: ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು – Kannada News | Tears for Teacher: Students Protest Transfer of Favourite Educator in Government School

ಕೊಪ್ಪಳ, ಜ.3: ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಗೇಟ್‌ ಬಂದ್‌ ಮಾಡಿ ಭಾವುಕರಾಗಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಾದ ವೀರಪ್ಪ ಅವರನ್ನು ಶಾಲೆಯಿಂದ ಹೊರಗೆ ಹೋಗದಂತೆ ಕಣ್ಣೀರು ಹಾಕಿದ್ದಾರೆ. “ನಾವು ಹೋಗಲ್ಲ, ಸರ್ ಬರಬೇಕು,” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಷಕರೊಬ್ಬರು ಮಾತನಾಡಿದ್ದಾರೆ. ವೀರಪ್ಪ ಸರ್​​ ಅವರು ನಮ್ಮ ಮಕ್ಕಳನ್ನು ಅವರ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ನೋಡ್ಕೊಂಡಿದ್ದಾರೆ. ನಮ್ಮ…

Read More

Tirupati Security Breach: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ, ಗೋಪುರ ಏರಿ ಕುಡುಕನಿಂದ ಅವಾಂತರ – Kannada News | Tirupati Security Breach: Drunk Man Climbs Gopuram at Govindaraja Swamy Temple, Sparks Safety Concerns

ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನ ತಿರುಪತಿ, ಜನವರಿ 3: ತಿರುಪತಿ ದೇಗುಲದಲ್ಲಿ (Tirupati Temple) ಭಾರಿ ಭದ್ರತಾ ಲೋಪ ಉಂಟಾಗಿದ್ದು, ಕುಡುಕನೊಬ್ಬ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿದ್ದಲ್ಲದೆ ಗೋಪುರ ಏರಿ ಅವಾಂತರ ಸೃಷ್ಟಿಸಿದ್ದಾನೆ. ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ (Govindaraja Swamy Temple) ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೀಪುರ ಏರಿದ್ದಾನೆ. ನಂತರ ಅಲ್ಲಿದ ಕಳಶಗಳನ್ನು…

Read More

ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್! ಸಿರೋಯಾ ಎಕ್ಸ್ ಪೋಸ್ಟ್​ನಲ್ಲೇನಿದೆ? – Kannada News | Lahar Singh Questions Siddaramaiah’s GRAAM Survey Report, X post goes viral

ಸಿಎಂ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್ ಸಿರೋಯಾ! ಬೆಂಗಳೂರು, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ವರದಿ ಮತ್ತು ಸಮೀಕ್ಷೆ ನಡೆಸುವ ಸಂಸ್ಥೆ GRAAM (ಗ್ಲೋಬಲ್ ರಿಸರ್ಚ್ ಅಂಡ್ ಅಕಾಡೆಮಿಕ್ ಅಸೋಸಿಯೇಷನ್ ಮೆಥೋಡ್ಸ್) ಸಂಶೋಧನೆ ವರದಿಗಳ ಬಗ್ಗೆ ಸಂಸದ, ಹಿರಿಯ ಬಿಜೆಪಿ ನಾಯಕ ಲಹರ್ ಸಿಂಗ್ ಸಿರೋಯಾ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, 6 ಮಹತ್ವದ ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದ್ದಾರೆ. ಸಿಎಂ, ಡಿಸಿಎಂ ಕುರ್ಚಿ ಕದನದ ಮಧ್ಯ ಸಿರೋಯಾ ಪೋಸ್ಟ್…

Read More

Shani Dev: ಇಂದು ವರ್ಷದ ಮೊದಲ ಶನಿವಾರ: ವರ್ಷ ಪೂರ್ತಿ ಶನಿ ದೇವರ ಆಶೀರ್ವಾದ ಪಡೆಯಲು ಈ ಪರಿಹಾರ ಮಾಡಿ – Kannada News | To get shani dev blessing year 2026 saturday remedies

ಹೊಸ ವರ್ಷ ಪ್ರಾರಂಭವಾಗಿದೆ. ಇಂದು ಹೊಸ ವರ್ಷದ ಮೊದಲ ಶನಿವಾರ. ಶನಿವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಶನಿವಾರದಂದು ಪೂಜೆ ಮತ್ತು ಉಪವಾಸ ಮಾಡುವುದರಿಂದ ಶನಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಜೊತೆಗೆ ಜೀವನದ ಎಲ್ಲಾ ದುಃಖ ಮತ್ತು ತೊಂದರೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ. ಹೊಸ ವರ್ಷದ ಮೊದಲ ಶನಿವಾರದಂದು ಪ್ರಾರ್ಥನೆ ಮತ್ತು ಉಪವಾಸದ ಜೊತೆಗೆ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ, ಶನಿ ದೇವರ ಆಶೀರ್ವಾದ ದೊರೆಯುತ್ತದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಾಗಾದರೆ, ಶನಿ ದೇವರನ್ನು…

Read More

International Mind-Body Wellness Day 2026: ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ – Kannada News | International Mind Body Wellness Day 2026: Know the history and importance of Mind Body Wellness Day

ಅಂತಾರಾಷ್ಟ್ರೀಯ ಮನಸ್ಸು ದೇಹ ಸ್ವಾಸ್ಥ್ಯ ದಿನImage Credit source: Freepik ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನವು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದ್ದು, ಈ ಎರಡೂ ಆರೋಗ್ಯವು ಉತ್ತಮವಾಗಿದ್ದಾಗ, ವ್ಯಕ್ತಿಯು ಉತ್ತಮ, ಸಕಾರಾತ್ಮಕ ಜೀವನವನ್ನು ನಡೆಸಲು ಸಾಧ್ಯ. ಅಲ್ಲದೆ, ಮಾನಸಿಕ ಶಾಂತಿ ಮತ್ತು ದೈಹಿಕ ಸದೃಢತೆಯು ಒತ್ತಡವನ್ನು ಕಡಿಮೆ ಮಾಡಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಈ ಪ್ರಾಮುಖ್ಯತೆಯನ್ನು ಎತ್ತಿ…

Read More

ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ; ಗಿಲ್ಲಿ ತಿರುಗೇಟಿಗೆ ಮಂಕಾದ ಅಶ್ವಿನಿ ಗೌಡ – Kannada News | Gilli’s Shraddhanjali Poster Counter Silences Ashwini Gowda in Heated Spat

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಬಿಗ್ ಬಾಸ್ (Bigg Boss) ಅಲ್ಲಿ ಒಳ್ಳೆಯ ಕಾಂಪಿಟೇಷನ್ ಬೆಳೆದಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಜನವರಿ 2ರ ಎಪಿಸೋಡ್​​ನಲ್ಲಿ ಇಬ್ಬರ ಮಧ್ಯೆ ಕಿರಕ್ ಆಗಿದೆ. ಕಳಪೆ ಕೊಡೋ ವಿಷಯದಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಘನಘೋರ ಜಗಳ ನಡೆದಿದೆ. ಅಶ್ವಿನಿ ಟ್ರಿಗರ್ ಮಾಡಿ, ಅವರಿಗೆ ತಿರುಗೇಟು ನೀಡಿದ್ದಾರೆ ಗಿಲ್ಲಿ. ಅಶ್ವಿನಿ ಗೌಡ ಅವರು ಮೊದಲು ಗಿಲ್ಲಿಗೆ ಕಳಪೆ ನೀಡಿದರು. ಇದಕ್ಕೆ ಅವರು ಕೊಟ್ಟ…

Read More

ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿಯ ಬಂಧನ – Kannada News | Deepfake Scandal: Muzaffarpur Arrest Over AI Generated President, PM Video

ಎಐ ಡೀಪ್‌ಫೇಕ್ ವಿಡಿಯೋ ಮಾಡಿದ ಆರೋಪಿ ಮುಜಫರ್ಪುರ, ಜ.2: ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯ ಹೆಸರು, ಧ್ವನಿಗಳು, ಫೋಟೋವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ನಕಲಿ ವೀಡಿಯೊವನ್ನು ರಚಿಸಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊರ್ವನನ್ನು ಮುಜಫರ್ಪುರ ಪೊಲೀಸರು ಬಂಧಿಸಿದ್ದಾರೆ. ಜನವರಿ 2, 2026 ರಂದು, ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಅವರ AI ವೀಡಿಯೊಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಈ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ಪ್ರಮೋದ್​​ ಕುಮಾರ್​ ಎಂದು ಗುರುತಿಸಲಾಗಿದೆ….

Read More