Headlines

nagaraj11081993

ಅಲಿಗಢ ಮುಸ್ಲಿಂ ವಿವಿ ಹಾಸ್ಟೆಲ್ ಕೊಠಡಿಯಿಂದ ನಕಲಿ ಕರೆನ್ಸಿ, 8 ಮೊಬೈಲ್ ಫೋನ್‌ಗಳು ವಶಕ್ಕೆ

ನವದೆಹಲಿ, ಏಪ್ರಿಲ್ 9: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಹಾಸ್ಟೆಲ್ ಕೊಠಡಿಯಿಂದ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ನಕಲಿ ಕರೆನ್ಸಿ ಸೇರಿದಂತೆ ಹಲವು ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಪೊಲೀಸರು ತಮಗೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದರು. ಆಗ ಸರ್ ಜಿಯಾವುದ್ದೀನ್ ಹಾಲ್‌ನ ಕೊಠಡಿಯಿಂದ 32 ಬೋರ್ ಪಿಸ್ತೂಲ್ ಗುಂಡುಗಳು, 12 ಬೋರ್ ಕಾರ್ಟ್ರಿಡ್ಜ್‌ಗಳು, ನಕಲಿ ಕರೆನ್ಸಿ, 8 ಮೊಬೈಲ್ ಫೋನ್‌ಗಳು ಮತ್ತು ಖಾಲಿ ಮ್ಯಾಗಜೀನ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಶೇವಾಜ್ ಆ ಕೊಠಡಿಯಲ್ಲಿ ವಾಸವಾಗಿದ್ದನು. ಅವನು…

Read More

ರಾಜ್ಯ ಸರ್ಕಾರದಿಂದ ಗುಡ್​​ ನ್ಯೂಸ್​​: ಹಲ್ಲಿನ ರೂಟ್ ಕ್ಯಾನಲ್ ಚಿಕಿತ್ಸೆಗೂ ಇನ್ಮುಂದೆ ವಿಮಾ ಯೋಜನೆ ಅಪ್ಲಿಕೇಬಲ್

ಬೆಂಗಳೂರು, ಏಪ್ರಿಲ್​​ 09: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಗುಡ್​​ ನ್ಯೂಸ್​​ ಒಂದನ್ನು ನೀಡಿದ್ದು, ಹಲ್ಲಿನ ಚಿಕಿತ್ಸೆಗೂ ವಿಮಾ ಯೋಜನೆ ಸಹಾಯ ಸಿಗುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್​​ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕ್ಯಾನಲ್ ಚಿಕಿತ್ಸೆ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ದಂತ ಚಿಕಿತ್ಸೆಯನ್ನೂ ಈ ಯೋಜನೆಯಡಿ ಫಲಾನುಭವಿಗಳು ಮಾಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡುವ ಮೂಲಕ ಸ್ವತಃ ಆರೋಗ್ಯ ಸಚಿವ ದಿನೇಶ್​​ ಗುಂಡೂರಾವ್​​…

Read More

PUC ನಂತರ ಮುಂದೇನು? ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಟಾಪ್ ಕೋರ್ಸ್‌ಗಳ ಮಾಹಿತಿ ಇಲ್ಲಿದೆ!

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನ ಅತ್ಯಂತ ನಿರ್ಣಾಯಕ ಘಟ್ಟಗಳು. ಫಲಿತಾಂಶ ಬಂದ ನಂತರ “ಮುಂದೇನು ಓದಬೇಕು? ಯಾವ ಕೆಲಸಕ್ಕೆ ಬೇಡಿಕೆಯಿದೆ?” ಎಂಬ ಗೊಂದಲ ಸಹಜ. ನೀವು ಆಯ್ದುಕೊಳ್ಳುವ ಒಂದು ಕೋರ್ಸ್ ನಿಮ್ಮ ಇಡೀ ವೃತ್ತಿಜೀವನದ ದಿಕ್ಕನ್ನೇ ಬದಲಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಲಭ್ಯವಿರುವ ಅತ್ಯುತ್ತಮ ಮತ್ತು ಉದ್ಯೋಗಾಧಾರಿತ ಕೋರ್ಸ್‌ಗಳ ವಿವರ ಇಲ್ಲಿದೆ: ವಿಜ್ಞಾನ ವಿಭಾಗ (Science): ವಿಜ್ಞಾನ ವಿಭಾಗದಲ್ಲಿ ಓದಿದವರಿಗೆ ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ…

Read More

‘ಸ್ಪಿರಿಟ್’ ಕೆಲಸ ಬಿಟ್ಟು ‘ಧುರಂಧರ್ 2’ ನೋಡಲು ಬಂದ ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ

ಟಾಲಿವುಡ್‌ ನಟ ಪ್ರಭಾಸ್ (Prabhas) ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈಗ ‘ಸ್ಪಿರಿಟ್’ (Spirit) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾದ ಕೆಲಸಗಳ ನಡುವೆ ಸಣ್ಣ ವಿರಾಮ ಪಡೆದುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ವೀಕ್ಷಿಸಲು ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಅವರು ಥಿಯೇಟರ್‌ಗೆ ಭೇಟಿ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಅವರಿಬ್ಬರು ಜೊತೆಯಾಗಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

Read More

ಪಿಯುಸಿ ನಂತರ AI ಲೋಕಕ್ಕೆ ಎಂಟ್ರಿ; ಆರ್ಟ್ಸ್, ಕಾಮರ್ಸ್ ಅಥವಾ ಸೈನ್ಸ್ ಯಾವುದೇ ಇರಲಿ, ನಿಮಗೂ ಇದೆ ಭವಿಷ್ಯ!

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿರುವುದು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಅಥವಾ ಕೃತಕ ಬುದ್ಧಿಮತ್ತೆ (AI). ಪಿಯುಸಿ ಬಳಿಕ ಕೇವಲ ಸೈನ್ಸ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಆರ್ಟ್ಸ್ ಮತ್ತು ಕಾಮರ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದರೂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಂದು ಹಲವು ಅವಕಾಶಗಳಿವೆ. ಯಂತ್ರಗಳಿಗೆ ಮನುಷ್ಯನಂತೆ ಆಲೋಚಿಸುವ ಮತ್ತು ಕಲಿಯುವ ಶಕ್ತಿಯನ್ನು ತುಂಬುವ ಈ ತಂತ್ರಜ್ಞಾನವು ಮುಂಬರುವ ದಶಕಗಳಲ್ಲಿ ಜಗತ್ತನ್ನು ಆಳಲಿದೆ. ಇದು ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿಕೊಳ್ಳುತ್ತಿರುವುದರಿಂದ, ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ…

Read More

Bihar Politics: ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಮುಂದಿನ ವಾರ ರಾಜೀನಾಮೆ ಸಾಧ್ಯತೆ, ಸಾಮ್ರಾಟ್ ಚೌಧರಿ ನೂತನ ಸಿಎಂ?

ಪಾಟ್ನಾ, ಏಪ್ರಿಲ್ 09: ಬಿಹಾರದ ರಾಜಕೀಯ ಇತಿಹಾಸದಲ್ಲಿ ಒಂದು ಸುದೀರ್ಘ ಮತ್ತು ಪ್ರಭಾವಶಾಲಿ ಅಧ್ಯಾಯ ಈಗ ಅಂತ್ಯದತ್ತ ಸಾಗುತ್ತಿದೆ. ಕಳೆದ ಎರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ಆಳವಾಗಿ ಬೇರೂರಿದ್ದ  ನಿತೀಶ್ ಕುಮಾರ್(Nitish Kumar), ಈಗ ಪಾಟ್ನಾದಿಂದ ದೆಹಲಿಯ ರಾಜಕೀಯ ಅಂಗಳಕ್ಕೆ ತಮ್ಮ ಪಯಣ ಬೆಳೆಸಿದ್ದಾರೆ. ನಿತೀಶ್ ಯುಗಾಂತ್ಯ: ಬಿಹಾರದ ಚಾಣಕ್ಯನ ದೆಹಲಿ ಪಯಣ ಬಿಹಾರ ರಾಜಕೀಯದಲ್ಲಿ ‘ಸುಶಾಸನ್ ಬಾಬು’ ಎಂದೇ ಖ್ಯಾತರಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಎರಡು ದಶಕಗಳ ಮುಖ್ಯಮಂತ್ರಿ ಪರ್ವ ಮುಕ್ತಾಯವಾಗುತ್ತಿದೆ. ರಾಜ್ಯ…

Read More

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಆನ್​​​ಲೈನ್​​​ನಲ್ಲಿ ರಿಸಲ್ಟ್ ಪ್ರಕಟ

ಬೆಂಗಳೂರು, (ಏಪ್ರಿಲ್ 09): 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (Karnataka 2nd PUC Result 2026) ಹೊರಬಿದ್ದಿದೆ. ಆನ್​​ಲೈನ್​​ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು,  ಬಳಿಕ  ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು (ಏಪ್ರಿಲ್ 09) ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ  ಪ್ರಕಟಿಸಲಿದ್ದಾರೆ. ಇದಕ್ಕೂ ಮೊದಲು ಆನ್​​ಲೈನ್​​ನಲ್ಲಿ https://karresults.nic.in ವೆಬ್​​ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಒಂದು ವೇಳೆ…

Read More

‘ದರ್ಶನ’ ಸಿನಿಮಾ ಮುಹೂರ್ತ: ತಬಲಾ ನಾಣಿ ಮಾತಿಗೆ ನಕ್ಕು ಸುಸ್ತಾದ ಜನ

ಇತ್ತೀಚೆಗಷ್ಟೆ ಕನ್ನಡದ ಮೂರು ಸಿನಿಮಾಗಳ (Cinema) ಮುಹೂರ್ತ ಒಟ್ಟಿಗೆ ನಡೆದಿದೆ. ‘ದರ್ಶನ’, ‘ಸೀತಾರಾಮ ರಾಜು’ ಮತ್ತು ‘ಕಾಡ’ ಸಿನಿಮಾದ ಮುಹೂರ್ತಗಳು ಒಟ್ಟಿಗೆ ನಡೆದಿದ್ದು, ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಮುಖ ನಟ, ನಟಿಯರು ಮುಹೂರ್ತದಲ್ಲಿ ಹಾಜರಾಗಿದ್ದರು. ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೃಥ್ವಿ ಅಂಬರ್ ನಟಿಸುತ್ತಿರುವ ‘ದರ್ಶನ’ ಸಿನಿಮಾನಲ್ಲಿ ನಟಿಸಲಿರುವ ಪೋಷಕ ನಟ ತಬಲಾ ನಾಣಿ ಮುಹೂರ್ತದ ವೇಳೆ ಮಾತನಾಡಿದ್ದು, ಅವರ ತಮಾಷೆ ಮಾತುಗಳು ಕೇಳಿ ಸಭಿಕರು ನಕ್ಕು ಹಗುರಾದರು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆ: ಯಾರಿಗೆಲ್ಲ ಸಿಕ್ಕಿತು ಅವಾರ್ಡ್

ಭಾರತದ 12 ಚಿತ್ರರಂಗಗಳನ್ನು (Movie Industry) ಪ್ರತಿನಿಧಿಸುವ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ತಮ್ಮ 2026ರ ಐಎನ್​​ಸಿಎ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಭಾಷಾವಾರು ಈ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡದಲ್ಲಿ ಎಲ್ಲ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ನೀಡಲಾಗಿದೆ. ‘ಕಾಂತಾರ: ಚಾಪ್ಟರ್ 1’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾಕ್ಕೂ ಐಎನ್​​ಸಿಎ ಪ್ರಶಸ್ತಿ ಲಭಿಸಿಲ್ಲ. ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತು ಸಿನಿಮಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಐಎನ್​​ಸಿಎ ಘೋಷಿಸಿದೆ. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ‘ಕಾಂತಾರ: ಚಾಪ್ಟರ್ 1’,…

Read More

ಬಾಲ ಬಿಚ್ಚಿದರೆ ಗಡೀಪಾರು: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

ಹುಬ್ಬಳ್ಳಿ, ಏಪ್ರಿಲ್ 9: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ (Hubballi-Dharawad) ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹಳೆ ಸಿಎಆರ್ (CAR) ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್‌ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಭಾಗಿಯಾಗಿದ್ದರು. ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್‌ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ…

Read More