Headlines

nagaraj11081993

Gold Rates: ನಿನ್ನೆ ಏರಿದ್ದ ಚಿನ್ನದ ಬೆಲೆ ಇವತ್ತು ಕುಸಿತ; ಬೆಳ್ಳಿಯೂ ಅಗ್ಗ

ಬೆಂಗಳೂರು, ಏಪ್ರಿಲ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಣ್ಣಾಮುಚ್ಚಾಳೆ ಆಟ ಆಡುತ್ತಿವೆ. ಅದರಲ್ಲೂ ಚಿನ್ನದ ಬೆಲೆಯಂತೂ ಪ್ರಕ್ಷುಬ್ಧತೆಯಿಂದ ಕೂಡಿದೆ. ನಿನ್ನ ಬಹುತೇಕ 500 ರೂಗಳಷ್ಟು ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು 200ಕ್ಕೂ ಹೆಚ್ಚು ರೂಗಳಷ್ಟು ಕುಸಿತ ಕಂಡಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಗಡಿಯೊಳಗೆ ಇಳಿದಿದೆ. ಬೆಳ್ಳಿ ಬೆಲೆಯೂ ಇಂದು ಗುರುವಾರ ಕಡಿಮೆಗೊಂಡಿದೆ. ನಿನ್ನೆ 10 ರೂ ಇಳಿದಿದ್ದ ಇದರ ಬೆಲೆ ಇವತ್ತು 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ…

Read More

ಪಾಕಿಸ್ತಾನದ ಮಧ್ಯಸ್ಥಿಕೆ ನಾಟಕಕ್ಕೆ ಇಸ್ರೇಲ್ ತಡೆ: ಪಾಕ್​ನ ವಿಶ್ವಾಸಾರ್ಹತೆ ಪ್ರಶ್ನಿಸಿದ ರಾಯಭಾರಿ ರುವೆನ್ ಅಜರ್

ವಾಷಿಂಗ್ಟನ್, ಏಪ್ರಿಲ್ 09: ಜಾಗತಿಕ ರಾಜಕೀಯದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಎರಡು ವಾರಗಳ ಕದನ ವಿರಾಮವು ಒಂದು ಅಚ್ಚರಿಯ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಆದರೆ, ಈ ಶಾಂತಿ ಪ್ರಕ್ರಿಯೆಯ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಈಗ ದೊಡ್ಡ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದೆ. ಪಾಕಿಸ್ತಾನವು ತನಗೆ ಬೇಕಾದಂತೆ ವಿಚಾರಗಳನ್ನು ತಿರುಚಿದೆ ಎನ್ನುವ ಆರೋಪ ಕೇಳಿಬಂದಿದೆ. ಲೆಬನಾನ್ ಮೇಲೆ ದಾಳಿ ಮಾಡಬೇಡಿ ಎನ್ನುವ ಷರತ್ತು ಕೂಡ ಅಮೆರಿಕಕ್ಕೆ ಇರಾನ್ ನೀಡಿದ್ದ ಷರತ್ತುಗಳ ಪಟ್ಟಿಯಲ್ಲಿತ್ತು ಎಂದು ಇರಾನ್ ಹೇಳಿದೆ…

Read More

Scorpio Horoscope: ವೃಶ್ಚಿಕ ರಾಶಿಯವರೇ ಗಮನಿಸಿ; ಈ ತಿಂಗಳು ನೀವು ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

ವೃಶ್ಚಿಕ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳ ಭವಿಷ್ಯವು ಮಿಶ್ರ ಫಲಿತಾಂಶಗಳಿಂದ ಕೂಡಿದೆ. ಗ್ರಹಗತಿಗಳ ಬದಲಾವಣೆಗಳು ನಿಮ್ಮ ಜೀವನದ ವಿವಿಧ ಆಯಾಮಗಳ ಮೇಲೆ ಪ್ರಭಾವ ಬೀರಲಿವೆ. ಈ ತಿಂಗಳು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಏರಿಳಿತಗಳಿರುತ್ತವೆ. ತಿಂಗಳ ಆರಂಭದಲ್ಲಿ ಆದಾಯದ ಹರಿವು ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆಯಿದೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ವಿಶೇಷವಾಗಿ ಆರೋಗ್ಯ ಅಥವಾ ಮನೆಯ ಶುಭ ಕಾರ್ಯಗಳಿಗಾಗಿ ಹಣ ವ್ಯಯವಾಗಬಹುದು. ಅನಗತ್ಯ ಹೂಡಿಕೆಗಳಿಂದ ದೂರವಿರಿ. ಶೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ…

Read More

4 ದಿನ ಕಾಡಿನಲ್ಲಿದ್ದ ಯುವತಿ ಮೇಲೆ ಈಗ ನಕ್ಸಲ್ ಶಂಕೆ! ಈ ಬಗ್ಗೆ ಶರಣ್ಯ ಹೇಳಿದ್ದೇನು?

ಬೆಂಗಳೂರು, ಏ.9: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ದಾರಿ ತಪ್ಪಿದ್ದ ಕೇರಳದ ಶರಣ್ಯ ಎಂಬ ಯುವತಿ, ನಾಲ್ಕು ದಿನಗಳ ಕಾಲ ದಟ್ಟ ಕಾಡಿನಲ್ಲಿ ಕಳೆದ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ, ಈ ಘಟನೆ ಈಗ ವಿವಾದಕ್ಕೆ ಈಡಾಗಿದೆ. ಆಕೆ ಪಬ್ಲಿಸಿಟಿಗಾಗಿ ಹೀಗೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶರಣ್ಯ, “ನಾನು ಪ್ರಾಣ ಉಳಿಸಿಕೊಳ್ಳಲು ಝರಿಗಳ ನೀರು ಕುಡಿದು ಬದುಕಿದೆನೇ ಹೊರತು, ಯಾವುದೇ ನಾಟಕ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ದಟ್ಟ ಕಾಡು ಮತ್ತು ಬೆಟ್ಟಗುಡ್ಡಗಳ…

Read More

Women’s Reservation Bill 2026: ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ: 2029 ರಿಂದ ಶೇ. 33 ಮಹಿಳಾ ಮೀಸಲಾತಿ ಜಾರಿ, ವಿಶೇಷ ಅಧಿವೇಶನಕ್ಕೆ ಕೇಂದ್ರದ ಕರೆ

ನವದೆಹಲಿ, ಏಪ್ರಿಲ್ 09: ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. 2029 ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಅಗತ್ಯವಿರುವ ಮೂರು ಪ್ರಮುಖ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಜೆಟ್ ಅಧಿವೇಶನ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ ಈ ಕುರಿತು ಭಾನುವಾರ (ಏಪ್ರಿಲ್ 5, 2026) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2023 ರಲ್ಲಿ…

Read More

ಬೆಂಗಳೂರು NIA ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು: ಮಾನವ ಕಳ್ಳಸಾಗಣೆ ಜಾಲದ ನಾಲ್ವರಿಗೆ ಜೈಲು ಶಿಕ್ಷೆ!

ಬೆಂಗಳೂರು, ಏ.9: ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ (Rigorous Imprisonment) ಮತ್ತು ತಲಾ 20,000 ರೂ. ದಂಡ ವಿಧಿಸಿ ಆದೇಶಿಸಿದೆ. ಜಾಕಿರ್ ಖಾನ್, ಬಾದಲ್ ಹೌಲಾದರ್, ಕಬೀರ್ ತಾಲುಕ್ದಾರ್ ಮತ್ತು ಮೊಹಮ್ಮದ್ ಬಚ್ಚು ಘರಾಮಿ ದೋಷಿಗಳು ಎಂದು ಹೇಳಿದ್ದಾರೆ. ಇವರು ಬೆನಾಪೋಲ್ ಮತ್ತು ಅಖೌರಾ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರು. ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಸೃಷ್ಟಿಸಿ…

Read More

Axar Patel: ಸ್ವಲ್ಪ ಜಾಣತನ ಮೆರೆಯಬೇಕು… ಇದುವೇ ಸೋಲಿಗೆ ಕಾರಣ..!

IPL 2026: ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಸೋತ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಮನಬಿಚ್ಚಿ ಮಾತನಾಡಿದ್ದಾರೆ. ಪಂದ್ಯದ ನಂತರದ ಮಾತನಾಡಿದ ಅವರು, ತಂಡದ ಪ್ರದರ್ಶನ ಮತ್ತು ಕೆ.ಎಲ್. ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ಸೋಲಿಗೆ ಕಾರಣವಾದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಸೋಲಿನಲ್ಲೂ ಧನಾತ್ಮಕ ಅಂಶಗಳು: “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳು ನಡೆದಾಗ…

Read More

ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ

ವಿಜಯಪುರ, ಏಪ್ರಿಲ್ 9: ಜಿಲ್ಲೆಯ ತಿಕೋಟಾ ತಾಲುಕು ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ 8:21ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಹಬನೂರು ಮತ್ತು ಟಕ್ಕಳಕಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಬಂದಿದ್ದಾರೆ. ಮಹಾರಾಷ್ಟ್ರದ ಗಡಿ ಗ್ರಾಮಗಳಾದ ಮೊರಬಗಿ ಮತ್ತು ತಿಕ್ಕುಂಡಿಯಲ್ಲೂ ಕಂಪನ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಕಣ್ಣಿಲ್ಲದವಳಿಗೆ ಕಿವಿ ಕೇಳದವನೇ ದಾರಿ: ಊಬರ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂವಹನ ಕಂಡು ಜಗತ್ತೇ ಫಿದಾ

ಇದು ಕೇವಲ ಒಂದು ಪ್ರಯಾಣದ ಕತೆಯಲ್ಲ, ಭಾಷೆ ಮತ್ತು ಶಬ್ದಗಳನ್ನು ಮೀರಿದ ಎರಡು ಮನಸ್ಸುಗಳ ನಡುವಿನ ಮೌನ ಸಂವಾದ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹೃದಯಸ್ಪರ್ಶಿ ಕಥೆ ‘ಮಾನವೀಯತೆ’ ಎನ್ನುವುದು ದೃಷ್ಟಿ ಅಥವಾ ಶ್ರವಣದ ಶಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ದೃಷ್ಟಿದೋಷವುಳ್ಳ ಪ್ರಯಾಣಿಕರೊಬ್ಬರು ಊಬರ್(Uber) ಬುಕ್ ಮಾಡಿದಾಗ ಅವರಿಗೆ ಸಿಕ್ಕ ಚಾಲಕ ಶ್ರವಣದೋಷವುಳ್ಳವರಾಗಿದ್ದರು. ಒಬ್ಬರಿಗೆ ದಾರಿ ಕಾಣಿಸುತ್ತಿರಲಿಲ್ಲ, ಇನ್ನೊಬ್ಬರಿಗೆ ಶಬ್ದ ಕೇಳಿಸುತ್ತಿರಲಿಲ್ಲ. ಆದರೆ ಇವರಿಬ್ಬರು ತಮ್ಮ ನಡುವಿನ ಸವಾಲುಗಳನ್ನು ಮೀರಿ, ಅತ್ಯಂತ ಪ್ರೀತಿಯಿಂದ ಸಂವಹನ…

Read More

Karnataka 2nd PUC Results 2026 Live: ಪಿಯುಸಿ ಫಲಿತಾಂಶದ ಕ್ಷಣಗಣನೆ ಶುರು; ಮಧ್ಯಾಹ್ನ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ರಿಸಲ್ಟ್ – Kannada News | Karnataka 2nd PUC Result 2026 Live Check Ranking, Score Toppers and more at karresults.nic.in, digilocker.gov.in online

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿರುವಂತೆ, ಇಂದು (ಏಪ್ರಿಲ್ 9, 2026) ಮಧ್ಯಾಹ್ನದ ವೇಳೆಗೆ ರಾಜ್ಯದ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಉನ್ನತ ವ್ಯಾಸಂಗದ ಕನಸು ಕಾಣುತ್ತಿದ್ದಾರೆ. ಫಲಿತಾಂಶದಲ್ಲಿ ಅಂಕಗಳ ಬಗ್ಗೆ ಸಮಾಧಾನವಿಲ್ಲದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಮಂಡಳಿಯ ವೆಬ್‌ಸೈಟ್‌ನಲ್ಲಿ ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಫಲಿತಾಂಶಕ್ಕಾಗಿ karresults.nic.in…

Read More