Weekly Horoscope: ಡಿಸೆಂಬರ್ ತಿಂಗಳ ಕೊನೆಯ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ – Kannada News | Weekly Horoscope: Zodiac Predictions and Planetary Influences last week of december
ಮೇಷ ರಾಶಿ : ಉದ್ಯೋಗದಲ್ಲಿ ಒತ್ತಡ, ಮಾತಿನಿಂದ ಸಂಘರ್ಷ ಸಾಧ್ಯ. ಆತ್ಮವಿಶ್ವಾಸ ಉಳಿಯುತ್ತದೆ. ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು. ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾದೀತು. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುವರು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಉತ್ತಮವಾಗಿದೆ.…