ಸೊಮಾಲಿಲ್ಯಾಂಡ್ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು? – Kannada News | Israel becomes first country to recognize Somaliland, know the importance of this African land
ಟೆಲ್ ಅವಿವ್, ಡಿಸೆಂಬರ್ 27: ದಶಕಗಳ ಹಿಂದೆ ಸೊಮಾಲಿಯಾ ದೇಶದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ (Somaliland) ಅನ್ನು ಸ್ವತಂತ್ರ ದೇಶ ಎಂದು ಇಸ್ರೇಲ್ ಮಾನ್ಯ ಮಾಡಿದೆ. ಸೋಮಾಲಿಲ್ಯಾಂಡ್ಗೆ ಅಧಿಕೃತ ದೇಶವೆಂಬ ಮಾನ್ಯತೆ ಕೊಟ್ಟ ಮೊದಲ ದೇಶವೂ ಇಸ್ರೇಲ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರ ಕಚೇರಿಯು ಈ ವಿಚಾರವನ್ನು ಪ್ರಕಟಿಸಿದ್ದು, ಸೋಮಾಲಿಲ್ಯಾಂಡ್ ಜೊತೆ ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಎಂದು ಘೋಷಿಸಿದೆ. ಆದರೆ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ಇದನ್ನು ಬಲವಾಗಿ ವಿರೋಧಿಸಿವೆ. ಸೋಮಾಲಿಲ್ಯಾಂಡ್…