nagaraj11081993

ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ – Kannada News | 2025: Bharat Secured, A Year That Redefined India’s Military Resolve Under PM Modi

ಭಾರತದ ಭದ್ರತಾ ದೃಷ್ಟಿಯಿಂದ 2025, ಮಹತ್ವದ ವರ್ಷ. ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಮಹತ್ತರ ಮೈಲಿಗಲ್ಲು ತಂದ ವರ್ಷ. ಭಾರತದ ಪ್ರಜೆಗಳ ಮೇಲಿನ ದಾಳಿಯನ್ನು ಸಂಯಮದಿಂದಷ್ಟೇ ಅಲ್ಲ ಕ್ಷಿಪ್ರವಾದ, ನಿಖರವಾದ ಮತ್ತು ನಿರ್ಣಾಯಕವಾದ ಕ್ರಮದಿಂದ ಎದುರಿಸಲಾಗುವುದು ಎಂಬುದನ್ನು ಪಿಎಂ ಮೋದಿ (Narendra Modi) ನಾಯಕತ್ವದ ಭಾರತ ತೋರಿಸಿಕೊಟ್ಟಿದೆ. ಭಯೋತ್ಪಾದನೆ ವಿಚಾರದಲ್ಲಿ ಪಿಎಂ ಮೋದಿ ಅವರು ಐದು ಹೊಸ ಸಹಜ ಕ್ರಮಗಳನ್ನು ತಿಳಿಸಿದ್ದಾರೆ. ಈ ನೀತಿಗಳು ಇಂತಿವೆ: ಭಯೋತ್ಪಾದನಾ ದಾಳಿಗಳಿಗೆ ಖಡಕ್ ಉತ್ತರ (ಯಾವುದೇ ದಾಳಿಯನ್ನೂ ನಿರ್ಣಾಯಕ ಪ್ರತಿದಾಳಿಯಿಂದ ಉತ್ತರಿಸಲಾಗುವುದು)…

Read More

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ; ಭುಗಿಲೆದ್ದ ವಿವಾದ – Kannada News | Lord Vishnu statue demolition in Cambodia what is the Controversy 

ಕಾಂಬೋಡಿಯಾ, ಡಿಸೆಂಬರ್ 26: ಥೈಲ್ಯಾಂಡ್-ಕಾಂಬೋಡಿಯಾ ಗಡಿಯಲ್ಲಿ ಮಿಲಿಟರಿ ಘರ್ಷಣೆಗಳು ಮುಂದುವರೆದಿವೆ. ಥೈಲ್ಯಾಂಡ್ ಸೇನೆಯು ಕಾಂಬೋಡಿಯಾ ಗಡಿಯಲ್ಲಿ 9 ಮೀಟರ್ ಎತ್ತರದ ವಿಷ್ಣು ಪ್ರತಿಮೆಯನ್ನು ಕೆಡವಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ (Video Viral) ಆಗುತ್ತಿದೆ. ಈ ದೃಶ್ಯಗಳನ್ನು ನೋಡಿದ ನಂತರ ಪ್ರಪಂಚದಾದ್ಯಂತದ ನೆಟಿಜನ್‌ಗಳು ಮತ್ತು ಭಕ್ತರು ತೀವ್ರ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಬೋಡಿಯಾದಲ್ಲಿ ಹಿಂದೂ ನಂಬಿಕೆಯ ಮೇಲೆ ದಾಳಿ ನಡೆದಿದೆ. ಇದು ಪ್ರಪಂಚದಾದ್ಯಂತ ಹಿಂದೂಗಳ ಕೋಪವನ್ನು ಕೆರಳಿಸುತ್ತಿದೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದದಿಂದ ಪ್ರಭಾವಿತವಾಗಿರುವ ಪ್ರದೇಶದಲ್ಲಿ…

Read More

ಗಿಲ್ಲಿ ಬಗ್ಗೆ ಗುಟ್ಟಾಗಿ ಮಾತಾಡಿದ ಕಾವ್ಯಾ ಫ್ಯಾಮಿಲಿ: ಕೂಡಲೇ ಹೊರಗೆ ಕಳಿಸಿದ ಬಿಗ್ ಬಾಸ್ – Kannada News | Kavya Shaiva family sent out of Bigg Boss Kannada 12 house for this reason

ಬಿಗ್ ಬಾಸ್ ಮನೆಗೆ ಕಾವ್ಯಾ ಅವರ ಕುಟುಂಬದವರು ಬಂದಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಅವರನ್ನು ವಾಪಸ್ ಕಳಿಸಲಾಗಿದೆ. ಬಿಗ್ ಬಾಸ್ (BBK 12) ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಈ ಘಟನೆಯಿಂದಾಗಿ ಕಾವ್ಯಾ ಶೈವ (Kavya Shaiva) ಅವರಿಗೆ ತುಂಬಾ ನೋವಾಗಿದೆ. ತಾಯಿ ಮತ್ತು ತಮ್ಮ ದಿಢೀರ್ ಅಂತ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂತಲ್ಲ ಎಂದು ಕಾವ್ಯಾ ಅವರು ಕಣ್ಣೀರು ಹಾಕಿದ್ದಾರೆ. ಗಿಲ್ಲಿ ನಟ (Gilli Nata)…

Read More

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ – Kannada News | Accident Video of Kadali Gavala Palem Rajole Mandal Konaseema District Young Man died

ಮುಂಬೈ, ಡಿಸೆಂಬರ್ 26: ರಸ್ತೆಗಿಳಿದ ಮೇಲೆ ಸ್ವಲ್ಪ ಯಾಮಾರಿದರೂ ಜೀವವೇ ಹೋಗುತ್ತದೆ. ಹೀಗಾಗಿ, ಎಲ್ಲ ರೀತಿಯಿಂದಲೂ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ (Viral Video) ಆಗಿದೆ. ಹಾಲು ತರಲೆಂದು ಬೈಕ್​ನಲ್ಲಿ ಬರುತ್ತಿದ್ದ ಯುವಕನಿಗೆ ಭಾರೀ ವಾಹನವೊಂದು ಜೋರಾಗಿ ಡಿಕ್ಕಿ ಹೊಡೆದಿದೆ. ಈ ದೃಶ್ಯ ಎದುರಿನ ಸಣ್ಣ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನ್ವೇಶ್ ಎಂಬ 20 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ…

Read More

ಪಹಲ್ಗಾಮ್ ದಾಳಿಯ ತನಿಖೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ; ಅಮಿತ್ ಶಾ – Kannada News | Terror Plotters Punished and Executors Neutralised by Indias security forces Amit Shah says

ನವದೆಹಲಿ, ಡಿಸೆಂಬರ್ 26: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಯಶಸ್ವಿ ತನಿಖೆ ನಡೆಸುವ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಮಾಸ್ಟರ್​​ಮೈಂಡ್​​ಗಳಿಗೆ ಬಲವಾದ ಮತ್ತು ಸೂಕ್ತವಾದ ಉತ್ತರವನ್ನು ನೀಡಲಾಗಿದೆ. ಪಹಲ್ಗಾಮ್ ತನಿಖೆಯು ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನೆದುರು ಮತ್ತೊಮ್ಮೆ ಬಯಲು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ದಾಳಿಕೋರರು 26 ಜನರನ್ನು ಕೊಲ್ಲಲಾಗಿತ್ತು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ದಿನಗಳ ಕಾಲ ನಡೆದ…

Read More

VHT 2025-26: 2 ಪಂದ್ಯಗಳನ್ನಾಡಿ ಡೆಲ್ಲಿ ತಂಡವನ್ನು ತೊರೆದ ವಿರಾಟ್ ಕೊಹ್ಲಿ – Kannada News | Virat Kohli’s Vijay Hazare Trophy Exit: Star’s Stellar Performance, Break and Return

ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದು ಅಮೋಘ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇದೀಗ ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದಾರೆ. ಕೊಹ್ಲಿ ತಂಡದಿಂದ ಬೇರ್ಪಟ್ಟು, ದೆಹಲಿಗೆ ಮರಳಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಸಿಸಿಐ ಆದೇಶದ ಪ್ರಕಾರ ಈ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ ವಿರಾಟ್, ಮನೆಗೆ ವಾಪಸ್ಸಾಗಿದ್ದಾರೆ. ಆದಾಗ್ಯೂ ಕೊಹ್ಲಿ ಮುಂದಿನ ದಿನಗಳಲ್ಲಿ ಈ ಟೂರ್ನಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಡೆಲ್ಲಿ…

Read More

‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ – Kannada News | Ranveer Singh starrer Dhurandhar movie action scene BTS video

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಚಿತ್ರದಲ್ಲಿ ಕ್ರೌರ್ಯದ ದೃಶ್ಯಗಳು ಇರುವುದು ಕೂಡ ‘ಎ’ ಪ್ರಮಾಣಪತ್ರ ಸಿಗಲು ಕಾರಣ. ರಣವೀರ್ ಸಿಂಗ್ (Ranveer Singh), ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಸಿನಿಮಾದಲ್ಲಿನ ಕೌರ್ಯದ ದೃಶ್ಯಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಆ ಪೈಕಿ ಒಂದು ದೃಶ್ಯದ ಶೂಟಿಂಗ್ ಯಾವ ರೀತಿ ನಡೆದಿತ್ತು…

Read More

ಮೈಸೂರು ಸ್ಫೋಟ ಪ್ರಕರಣ: ಮುಂದುವರೆದ ಸಾವಿನ ಸರಣಿ, ಮರ್ತೋವ ಮಹಿಳೆ ಸಾವು – Kannada News | Mysuru Balloon Gas Cylinder Blast: Death Toll Rises to Three

ಮೈಸೂರು, ಡಿಸೆಂಬರ್​ 26: ಮೈಸೂರು ಅರಮನೆ ಬಳಿ ಹೀಲಿಯಂ​ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ (cylinder Blast case) ಸಂಬಂಧಿಸಿದಂತೆ ಇದೀಗ ಮೃತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಎನ್ನುವವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ (death). ಲಕ್ಷ್ಮೀ ಕುಟುಂಬದವರ ಜೊತೆಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿತ್ತು. ಇನ್ನು ಲಕ್ಷ್ಮೀ ಅವರ ಮಗಳು ಡಿಂಪಲ್​​ ದುರಂತದಿಂದ ಬಚಾವ್‌ ಆಗಿದ್ದಾರೆ. ಸದ್ಯ ತಾಯಿ ಮೃತಪಟ್ಟ ಹಿನ್ನೆಲೆ ಪುತ್ರಿ…

Read More

2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ – Kannada News | Dhurandhar actor Akshaye Khanna reportedly demands Rs 21 Cr for Drishyam 3

ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಧುರಂಧರ್’ (Dhurandhar) ಚಿತ್ರ ಪಾತ್ರವಾಗಿದೆ. ಈ ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರೂ ಹೈಲೈಟ್ ಆಗಿದ್ದಾರೆ. ಹೀರೋ ಆಗಿ ರಣವೀರ್ ಸಿಂಗ್ ಅವರು ಮಿಂಚಿದ್ದಾರೆ. ವಿಲನ್ ಪಾತ್ರದಲ್ಲಿ ಅಕ್ಷಯ್ ಖನ್ನಾ (Akshaye Khanna) ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ರಣವೀರ್ ಸಿಂಗ್​​ಗಿಂತಲೂ ಅಕ್ಷಯ್ ಖನ್ನಾ ಅವರ ಬಗ್ಗೆಯೇ ಪ್ರೇಕ್ಷಕರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ‘ಧುರಂಧರ್’ ಚಿತ್ರದಿಂದ ಈ ಪರಿ ಯಶಸ್ಸು ಸಿಕ್ಕಿದ್ದಕ್ಕಾಗಿ ಅಕ್ಷಯ್…

Read More

ಅಮೆರಿಕದೊಂದಿಗೆ ಟ್ರೇಡ್ ಡೀಲ್; ಅಂತಿಮ ಪ್ರಸ್ತಾಪ ಸಲ್ಲಿಸಿದ ಭಾರತ; ಕೃಷಿ ತಂಟೆ ಬೇಡ, ಟ್ಯಾರಿಫ್ ನಿಲ್ಲಿಸಿ ಎಂಬುದು ಭಾರತದ ಬೇಡಿಕೆ – Kannada News | India tables final trade proposal to US, demands tariff cut to 15pc and wants Agriculture out of negotiation

ನವದೆಹಲಿ, ಡಿಸೆಂಬರ್ 26: ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ (India US trade deal) ನಡೆಯುತ್ತಿರುವ ಮಾತುಕತೆ ಮತ್ತು ಸಂಧಾನಗಳು ಫಲಪ್ರದವಾಗುವಂತೆ ಕಾಣುತ್ತಿವೆ. ಸರ್ವಸಮ್ಮತವಾದ ಮತ್ತು ನ್ಯಾಯಯುತವಾದ ಒಪ್ಪಂದದತ್ತ ಸಾಗುತ್ತಿದ್ದೇವೆ ಎಂದು ಸಂಧಾನದ ನೇತೃತ್ವದ ವಹಿಸಿರುವ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಭಾರವು ತನ್ನ ಒಪ್ಪಂದ ಅಂತಿಮ ಪ್ರಸ್ತಾಪವನ್ನು ಅಮೆರಿಕದ ಮುಂದಿಟ್ಟಿದೆಯಂತೆ. ಟ್ಯಾರಿಫ್ ಕಡಿತಗೊಳಿಸಬೇಕು, ಕೃಷಿ ಸಂಬಂಧಿತ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಬೇಕು ಎಂಬುದು ಭಾರತ ಸಲ್ಲಿಸಿರುವ ಪ್ರಸ್ತಾವದಲ್ಲಿರುವ ಪ್ರಮುಖ ಅಂಶ. ಶೇ….

Read More