ಪದೇ ಪದೇ ಕರೆಂಟ್ ತೆಗೆಯುತ್ತಿದ್ದ ಪವರ್ ಅಧಿಕಾರಿಗಳಿಗೆ ಶಾಕ್ ಕೊಟ್ಟ ಶಾಸಕ – Kannada News | MLA Virendra Jati Disconnects Officials’ Electricity in Haridwar After Power Cuts
ಹರಿದ್ವಾರ, ಡಿ25: ಅಧಿಕಾರಿಗಳು ಜನರನ್ನು ಗೋಳಾಡಿಸುವುದನ್ನು ನೋಡಿರಬಹುದು, ಆದರೆ ಒಬ್ಬ ಜನಪ್ರತಿನಿಧಿಯನ್ನು ಅಧಿಕಾರಿಗಳು ಆಟ ಆಡಿಸುವುದನ್ನು ನೋಡಿರಲು ಸಾಧ್ಯವಿಲ್ಲ. ಶಾಸಕರೊಬ್ಬರು ತಮ್ಮ ಮಾತಿಗೆ ಕಿಮ್ಮತ್ತು ನೀಡದ ಅಧಿಕಾರಿಗಳಿಗೆ ಸರಿಯಾದ ಪಾಠ ಕಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರ (Haridwar) ಜಿಲ್ಲೆಯ ಝಬ್ರೆಡಾದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ ಅವರು, ಪ್ರತಿದಿನ ತನ್ನ ಏರಿಯಾದಲ್ಲಿ ವಿದ್ಯುತ್ ಕಡಿತದಿಂದ ಬೇಸತ್ತು. ತಾವೇ ವಿದ್ಯುತ್ ಕಂಬ ಹತ್ತಿ ಇಲಾಖೆಯ ಮೂವರು ಅಧಿಕಾರಿಗಳ ಮನೆಯ ವಿದ್ಯುತ್ ಕಡಿತಗೊಳಿಸಿದ್ದಾರೆ. ವಿದ್ಯುತ್ ಕಡಿತದ ಕುರಿತು ವಿದ್ಯುತ್ ಇಲಾಖೆಯು ಶಾಸಕರ…