ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ
ವಾಷಿಂಗ್ಟನ್, ಏಪ್ರಿಲ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ಗೆ ಹೊಸ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ಪ್ರಮುಖ ದಾಳಿಯನ್ನು ನಡೆಸಬಹುದು, ಇದರಿಂದಾಗಿ ಇಡೀ ದೇಶದ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಬಹುದು ಎನ್ನುವ ಭಯ ಉಂಟಾಗಿದೆ. ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ. ಮಾರ್ಚ್ 26 ರಂದು ಟ್ರಂಪ್ 10 ದಿನಗಳ…