nagaraj11081993

IND-W vs SL-W: ಶಫಾಲಿ ಸಿಡಿಲಬ್ಬರದ ಬ್ಯಾಟಿಂಗ್‌; ಟೀಂ ಇಂಡಿಯಾಗೆ ಸತತ 2ನೇ ಗೆಲುವು – Kannada News | India Women vs Sri Lanka 2nd T20: Shafali Verma’s 69* Secures India’s 2 0 Series Lead

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಆತಿಥೇಯ ಭಾರತ ತಂಡ ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 129 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ, ಯುವ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನು…

Read More

IND-W vs SL-W: ಟಾಸ್ ಗೆದ್ದ ಟೀಂ ಇಂಡಿಯಾ; ತಂಡದಲ್ಲಿ 1 ಬದಲಾವಣೆ – Kannada News | India vs Sri Lanka Women 2nd T20 toss and playing 11 updates

ಭಾರತ ಮತ್ತು ಶ್ರೀಲಂಕಾ ಮಹಿಳಾ (India vs Sri Lanka Women) ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯ ವಿಶಾಖಪಟ್ಟಣದಲ್ಲಿ (Visakhapatnam) ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಭಾರತ 1-0 ಅಂತರದ ಮುನ್ನಡೆ ಸಾಧಿಸಿದ್ದು ಇದೀಗ ಈ ಪಂದ್ಯವನ್ನು ಗೆಲ್ಲುವ ಮೂಲಕ ಈ ಮುನ್ನಡೆಯನ್ನು 2-0 ಅಂತರಕ್ಕೆ ಕೊಂಡೊಯ್ಯಲು ಹರ್ಮನ್​ಪ್ರೀತ್ ಕೌರ್ ಪಡೆ ನೋಡುತ್ತಿದೆ. ಉಭಯ ತಂಡಗಳ ನಡುವೆ ಇದೇ ವಿಶಾಖಪಟ್ಟಣನಲ್ಲಿ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌…

Read More

ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ – Kannada News | A man shots his wife dead on a busy road In Bengaluru after she asking divorce

ಬೆಂಗಳೂರು, (ಡಿಸೆಂಬರ್ 23):  ಗಂಡ ಹೆಂಡತಿ (Husband And Wife) ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್‌ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್‌ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚ್ಛೇದನ ಸಂಬಂಧ ನ್ಯಾಯಾಲಯಕ್ಕೆ…

Read More

ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಸರ್​​ಪ್ರೈಸ್ – Kannada News | Surprise Visit to Wedding Monkey jumps on bride during kanyadaan ritual watch viral video

ರಿಷಿಕೇಶ, ಡಿಸೆಂಬರ್ 23: ಉತ್ತರಾಖಂಡದ ರಿಷಿಕೇಶದಲ್ಲಿ ವಧು-ವರ ವಿವಾಹವಾಗುತ್ತಿದ್ದರು. ಮದುವೆ ಭರದಿಂದ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಕೋತಿ ಮದುವೆಯ ಮಂಟಪಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿತು. ನದಿಯ ದಡದಲ್ಲಿ ನಡೆದ ಮದುವೆಯಲ್ಲಿ ಪುರೋಹಿತರು ವೇದ ಮಂತ್ರಗಳನ್ನು ಪಠಿಸುತ್ತಿದ್ದಾಗ ಕೋತಿಯೊಂದು ಸರ್​​ಪ್ರೈಸ್ ವಿಸಿಟ್ ನೀಡಿದೆ. ಕನ್ಯಾದಾನದ ವೇಳೆ ಕೋತಿಯೊಂದು ಮದುಮಗಳ ಮೇಲೆ ಹಾರಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವಿಡಿಯೋವನ್ನು (Viral Video) ನೋಡಿದ ಜನರು ಇದು ಕೇವಲ ತಮಾಷೆಯಲ್ಲ, ಬದಲಾಗಿ ಹನುಮಂತನ ಆಶೀರ್ವಾದ ಎಂದು ಕಮೆಂಟ್ ಮಾಡಿದ್ದಾರೆ. ಇನ್ನಷ್ಟು…

Read More

ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್ – Kannada News | BJP leader harasses visually challenged woman in Madhya Pradesh jabalpur

ಜಬಲ್ಪುರ, ಡಿಸೆಂಬರ್ 23: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರು ದೃಷ್ಟಿಹೀನ ಮಹಿಳೆಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವೇಳೆ ಮಹಿಳಾ ನಾಯಕಿ ದೃಷ್ಟಿಹೀನ ಮಹಿಳೆಯ ಬಗ್ಗೆ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿ ಆ ದೃಷ್ಟಿಹೀನ ಮಹಿಳೆಗೆ ನೀನು ಮುಂದಿನ ಜನ್ಮದಲ್ಲೂ ಕುರುಡಿಯಾಗೇ ಹುಟ್ಟುತ್ತೀಯ ಎಂದು ಹೇಳುವುದನ್ನು ಕೇಳಬಹುದು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source…

Read More

ನಾಳೆಯ ಹವಾಮಾನ: ರಾಜ್ಯದ ಹಲವೆಡೆ ಚಳಿ, ಇರಲಿದೆ ಮಂಜಿನ ಅಬ್ಬರ – Kannada News | Tomorrow Weather: Severe cold wave expected in South and North Interior Karnataka tomorrow, heavy fog in Bengaluru

ಬೆಂಗಳೂರು, ಡಿಸೆಂಬರ್​​ 23: ರಾಜ್ಯದಾದ್ಯಂತ ನಾಳೆಯೂ ಚಳಿಯ ಪ್ರಭಾವ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬೆಳಗಿನ ಜಾವ ತೀವ್ರ ಚಳಿ ಹಾಗೂ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಲ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ದಿನದ ಹೊತ್ತಿನಲ್ಲಿ ಒಳಹವೆ ಇರಲಿದ್ದು, ತಾಪಮಾನ…

Read More

ರೈತರ ಬದುಕಿನಲ್ಲಿ ಚೆಲ್ಲಾಟ: ಮೆಕ್ಕೆಜೋಳ ಬೆಳೆಗಾರರ ಪಾಲಿಗೆ ವಿಲನ್ ಆದ ಸರ್ಕಾರ – Kannada News | Dharwad Maize Farmers in Crisis: Support Price Delay Hits Hard

ಧಾರವಾಡ, ಡಿಸೆಂಬರ್​​ 23: ರೈತ (farmer) ದೇಶದ ಬೆನ್ನೆಲುಬು ಅಂತಾ ಹೇಳುತ್ತಲೇ ಬರುವ ಸರಕಾರ ಮತ್ತೊಂದೆಡೆ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನೂ ಮಾಡುತ್ತಲೇ ಇರುತ್ತೆ. ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಮೆಕ್ಕೆಜೋಳ (Maize) ಚೆನ್ನಾಗಿ ಬಂದಿದೆ. ಇದರಿಂದಾಗಿ ರೈತರು ಖುಷಿಯಾಗುವ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡು, ರೈತರು ಕಂಗಾಲಾಗಿ ಹೋದರು. ಇದೇ ಕಾರಣಕ್ಕೆ ಬೆಂಬಲ ಬೆಲೆ ಅಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹೋರಾಟ ಶುರುವಾಯಿತು. ಇದಕ್ಕೆ ಮಣಿದ ಸರಕಾರ ಖರೀದಿಯೇನೋ ಆರಂಭಿಸಿತು. ಆದರೆ ಅಲ್ಲಿಯೂ ಆಟವಾಡುವ…

Read More

ಜೈಲಿಗೆ ತೆರಳಿ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್​​ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ: ದಾಸನ ರಿಯಾಕ್ಷನ್ ಏನು? – Kannada News | Vijayalakshmi Darshan talks with husband about fans war after Kichcha Sudeep Hubballi statement

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿಜಯಲಕ್ಷ್ಮಿ (Vijayalakshmi Darshan) ಭೇಟಿ ಮಾಡಿ ಬಂದಿದ್ದಾರೆ. ಹುಬ್ಬಳಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ನೀಡಿದ ಹೇಳಿಕೆ ಬಳಿಕ ಶುರು ಆಗಿರುವ ಫ್ಯಾನ್ಸ್ ವಾರ್ ಕುರಿತು ದರ್ಶನ್ ಅವರಿಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಹೋದರ ದಿನಕರ್ ತೂಗುದೀಪ ಕೂಡ ಜೊತೆಗಿದ್ದರು. ಜೈಲಿಗೆ ಭೇಟಿ ನೀಡಿ ಬಂದ ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಖುಷಿಯಿಂದ ಪೋಸ್ಟ್ ಮಾಡಿದ್ದಾರೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ನಡುವೆ ದರ್ಶನ್…

Read More

Ashes 2025: ಸತತ ಆರು ದಿನ ಮದ್ಯ ಸೇವನೆ; ಇಂಗ್ಲೆಂಡ್‌ ಆಟಗಾರರ ವಿರುದ್ಧ ತನಿಖೆಗೆ ಆದೇಶ – Kannada News | Ashes Debacle: England Cricket Team’s 6 Day Alcohol Binge Allegations

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (England vs Australia) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಆಶಸ್ (Ashes) ಸರಣಿ ಇದುವರೆಗೆ ಏಕಪಕ್ಷೀಯವಾಗಿ ನಡೆದಿದೆ. ನಡೆದಿರುವ 3 ಪಂದ್ಯಗಳಲ್ಲೂ ಆತಿಥೇಯ ಆಸ್ಟ್ರೇಲಿಯಾವೇ ಜಯದ ನಗೆ ಬೀರಿದೆ. ಇತ್ತ ಈ ಪ್ರವಾಸದಲ್ಲಾದರೂ ಆಸ್ಟ್ರೇಲಿಯಾವನ್ನು ಮಣಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್‌ ಸೋತು ಸುಣ್ಣವಾಗಿದೆ. ಈ ರೀತಿಯ ಅವಮಾನಕರ ಸೋಲಿನ ನಡುವೆಯೂ ಇಂಗ್ಲೆಂಡ್‌ ಆಟಗಾರರ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಕಾಂಗರೂಗಳ ನಾಡಲ್ಲಿ ಆಂಗ್ಲ ಆಟಗಾರರು ಸತತ 6 ದಿನ ಮದ್ಯ ಸೇವನೆ ಮಾಡಿದ…

Read More

ಮುಸ್ಲಿಂ ದೇಶದಲ್ಲಿ 4500 ವರ್ಷ ಪ್ರಾಚೀನ ಸೂರ್ಯ ದೇವಾಲಯ ಪತ್ತೆ; ಎಲ್ಲಿದೆ ಈ ದೇವಸ್ಥಾನ? – Kannada News | 4500 Year Old Ancient Sun Temple Discovered in Egypt Viral News

ನವದೆಹಲಿ, ಡಿಸೆಂಬರ್ 23: ಈಜಿಪ್ಟ್ ದೇಶದ ರಾಜಧಾನಿ ಕೈರೋ ಬಳಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನ ನಡೆದಿದ್ದು, ಇದು ಪ್ರಪಂಚದಾದ್ಯಂತದ ಇತಿಹಾಸಕಾರರು ಮತ್ತು ವಿಜ್ಞಾನಿಗಳ ಗಮನ ಸೆಳೆದಿದೆ. ಪುರಾತತ್ತ್ವಜ್ಞರು ಸೂರ್ಯ ದೇವರಿಗೆ ಮೀಸಲಾಗಿರುವ 4,500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು (Temple) ಕಂಡುಹಿಡಿದಿದ್ದಾರೆ. ಐದನೇ ರಾಜವಂಶದ ಫೇರೋ ರಾಜ ನೆಸೆರೆ ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಜಂಟಿ ಇಟಾಲಿಯನ್ ಮತ್ತು ಪೋಲಿಷ್ ಪುರಾತತ್ತ್ವ ಶಾಸ್ತ್ರದ ಕಾರ್ಯಾಚರಣೆಯಿಂದ ಈ ಆವಿಷ್ಕಾರವನ್ನು ಮಾಡಲಾಗಿದೆ. ಈಜಿಪ್ಟ್ ತನ್ನ ಪಿರಮಿಡ್‌ಗಳು, ಮಮ್ಮಿಗಳು ಮತ್ತು ಸಮಾಧಿಗಳಿಗೆ ಹೆಸರುವಾಸಿಯಾಗಿದೆ….

Read More