‘ಧುರಂಧರ್ 2’ ಯಶಸ್ಸು, ರಣ್ವೀರ್ ಸಿಂಗ್ಗೆ ಐದು ಕೋಟಿ ಮೌಲ್ಯದ ಕಾರು ಕೊಟ್ಟ ಆದಿತ್ಯ-ಗೌತಮಿ
‘ಧುರಂಧರ್ 2’ (Dhurandhar) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಎರಡು ವಾರಗಳಲ್ಲೇ ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದೂ ‘ಧುರಂಧರ್ 2’ ಸಿನಿಮಾದ ನಿರ್ಮಾಣಕ್ಕೆ, ಪ್ರಚಾರಕ್ಕೆ ಬಹಳ ಕಡಿಮೆ ಹಣ ಖರ್ಚು ಮಾಡಲಾಗಿದೆ. ಸಿನಿಮಾ ನಿರ್ದೇಶನ ಮಾಡಿರುವ ಆದಿತ್ಯ ಧರ್ ಅವರು ಸಿನಿಮಾದ ಮೂವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ‘ಧುರಂಧರ್’ ಸಿನಿಮಾ ಈಗಾಗಲೇ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ…