7 ತಿಂಗಳ ಗರ್ಭಿಣಿ ಹತ್ಯೆ ಪ್ರಕರಣ: ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು – Kannada News | Dalit Outcry: Hubballi Father Murders 7 Month Pregnant Daughter, Justice for Manya
ಹುಬ್ಬಳ್ಳಿ, ಡಿ.22: ಹುಬ್ಬಳ್ಳಿಯಲ್ಲಿ ನಡೆದ ಭೀಕರ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಂದಿರುವ ಘಟನೆಯೊಂದು ನಡೆದಿದೆ. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಜಾತಿ ಆಧಾರಿತ ಮದುವೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆಯಾಗಿರುವ ಮಹಿಳೆಯನ್ನು ಮಾನ್ಯಾ ಎಂದು ಗುರುತಿಸಲಾಗಿದ್ದು, ಇದೀಗ ಆಂಬ್ಯುಲೆನ್ಸ್‌ನಲ್ಲಿ ಆಕೆಯ ದೇಹವನ್ನು ಸಾಗಿಸುವಾಗ ದಲಿತ ಸಂಘಟನೆಗಳ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಧಿಕ್ಕಾರ, ಧಿಕ್ಕಾರ, ಬೇಕು ಬೇಕು ನ್ಯಾಯ ಬೇಕು,…