ಮಾಸ್ಕೋ: ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು – Kannada News | Senior Russian Military Officer Killed in Moscow Car Bomb Explosion
ರಷ್ಯಾ, ಡಿಸೆಂಬರ್ 22: ಮಾಸ್ಕೋದಲ್ಲಿ ಕಾರೊಳಗೆ ಬಾಂಬ್ ಸ್ಫೋಟಗೊಂಡಿದ್ದು, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಹಿಂದೆ ಉಕ್ರೇನ್ ಪಡೆಗಳ ಕೈವಾಡವಿರಬಹುದು ಎಂದು ಅಂದಾಜಿಸಲಾಗಿದೆ. ಫೆಬ್ರವರಿ 2022 ರಲ್ಲಿ ಮಾಸ್ಕೋ ಉಕ್ರೇನ್ಗೆ ಸೈನ್ಯವನ್ನು ಕಳುಹಿಸಿದ ನಂತರ, ರಷ್ಯಾ ಮತ್ತು ರಷ್ಯಾ ನಿಯಂತ್ರಿತ ಉಕ್ರೇನಿಯನ್ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಅಧಿಕಾರಿಗಳು ಮತ್ತು ಕ್ರೆಮ್ಲಿನ್ ಪರ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳು ನಡೆದಿವೆ. ಏಪ್ರಿಲ್ನಲ್ಲಿ ಮಾಸ್ಕೋ ಬಳಿ ನಡೆದ ಕಾರು ಸ್ಫೋಟದಲ್ಲಿ ಜನರಲ್ ಯಾರೋಸ್ಲಾವ್ ಮೊಸ್ಕಾಲಿಕ್ ಸಾವನ್ನಪ್ಪಿದ್ದರು….