ಟ್ರಂಪ್ ಸರ್ಕಾರದಿಂದ ಫಾರ್ಮಾ ಉತ್ಪನ್ನಗಳಿಗೆ ನೂರಕ್ಕೆ ನೂರು ಟ್ಯಾರಿಫ್; ಲೋಹಗಳಿಗೂ ಭರ್ಜರಿ ಸುಂಕ
ವಾಷಿಂಗ್ಟನ್, ಏಪ್ರಿಲ್ 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಟ್ಯಾರಿಫ್ ಗುಮ್ಮ ಹೊರತಂದಿದ್ದಾರೆ. ಕೆಲ ಫಾರ್ಮಾ ಉತ್ಪನ್ನಗಳ (Pharma products) ಮೇಲೆ ಶೇ. 100ರಷ್ಟು ಟ್ಯಾರಿಫ್ ವಿಧಿಸುವ ಕ್ರಮವನ್ನು ಟ್ರಂಪ್ ಕೈಗೊಂಡಿದ್ದಾರೆ. ಫಾರ್ಮಾ ಕ್ಷೇತ್ರದಲ್ಲಿ ಅಮೆರಿಕದ ‘ಮೋಸ್ಟ್ ಫೇವರ್ಡ್ ನೇಶನ್’ ಪ್ರೈಸಿಂಗ್ ಸ್ಕೀಮ್ಗೆ ಜೋಡಿತವಾಗದ ದೇಶಗಳ ಫಾರ್ಮಾ ಕಂಪನಿಗಳನ್ನು ಗುರಿ ಮಾಡಲಾಗಿದೆ. ಅಮೆರಿಕ ಸರ್ಕಾರದ ಹೊಸ ನೀತಿಗೆ ಬದ್ಧವಾಗಲು ಫಾರ್ಮಾ ಕಂಪನಿಗಳಿಗೆ ಕೆಲ ತಿಂಗಳು ಗಡುವು ಕೊಡಲಾಗಿದೆ. ದೊಡ್ಡ ಕಂಪನಿಗಳಿಗೆ 120 ದಿನದ ಗಡುವು ಇದೆ….