ಪರ್ಷಿಯನ್ ಶಾರ್ಕ್ಗಳಿಗೆ ಆಹಾರವಾಗುತ್ತಾರೆ ಅಮೆರಿಕನ್ ಸೈನಿಕರು: ಇರಾನ್ ಎಚ್ಚರಿಕೆ
ಟೆಹರಾನ್, ಮಾರ್ಚ್ 29: ಇರಾನ್ನ ಕೆಲ ಪ್ರದೇಶಗಳ ಮೇಲೆ ಭೂದಾಳಿ ಮಾಡಿ ಆಕ್ರಮಿಸಿಕೊಳ್ಳಲು (Ground Invasion) ಅಮೆರಿಕ ಹೊರಟಿದೆ ಎನ್ನುವ ಗುಸುಗುಸು ಸುದ್ದಿಗಳ ಬೆನ್ನಲ್ಲೇ ಇರಾನ್ ಕಟ್ಟರ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇರಾನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಅಮೆರಿಕ ಯತ್ನಿಸಿದ್ದೇ ಆದಲ್ಲಿ ಪರ್ಷಿಯನ್ ಗಲ್ಫ್ನಲ್ಲಿರುವ ಶಾರ್ಕ್ ಮೀನುಗಳಿಗೆ ಆ ಸೈನಿಕರು ಒಳ್ಳೆಯ ಆಹಾರವಾಗಲಿದ್ದಾರೆ ಎಂದು ಇರಾನ್ ಸೇನೆ ಹೇಳಿದೆ. ಇರಾನ್ ಸೇನೆಯ ಮುಖ್ಯ ಕಚೇರಿಯ ವಕ್ತಾರ ಹಾಗೂ ಬ್ರಿಗೇಡಿಯರ್ ಜನರಲ್ ಇಬ್ರಾಹಿಂ ಝುಲ್ಫಕಾರಿ ಅವರು ವಿಡಿಯೋ ಸಂದೇಶ ನೀಡುತ್ತಾ…