ರೇಮಂಡ್ ಗ್ರೂಪ್ ಮಾಜಿ ಛೇರ್ಮನ್ ವಿಜಯಪತ್ ಸಿಂಘಾನಿಯಾ ನಿಧನ; ಅಪರೂಪದ ಉದ್ಯಮಿ ಮತ್ತು ಸಾಹಸಿ
ನವದೆಹಲಿ, ಮಾರ್ಚ್ 29: ರೇಮಂಡ್ ಗ್ರೂಪ್ ಕಟ್ಟಿ ಬೆಳೆಸಿದ್ದ ಮತ್ತು ಅದರ ಮಾಜಿ ಛೇರ್ಮನ್ ಆದ ವಿಜಯಪತ್ ಸಿಂಘಾನಿಯಾ ನಿನ್ನೆ ಶನಿವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ರೇಮಂಡ್ ಗ್ರೂಪ್ನ ಈಗಿನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರ ತಂದೆಯಾದ ವಿಜಯಪತ್ ಸಿಂಘಾನಿಯಾ ಅವರ ಅಂತ್ಯಸಂಸ್ಕಾರ ಮುಂಬೈನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ತಮ್ಮ ತಂದೆ ಮೃತಪಟ್ಟಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಸಿಂಘಾನಿಯಾ ಘೋಷಿಸಿದ್ದಾರೆ. ಮುಂಬೈನ ಚಂದನವಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ….