ರಾಮ್ ಚರಣ್ಗೆ ಗಂಭೀರ ಗಾಯ: ‘ಪೆದ್ದಿ’ ಬಿಡುಗಡೆ ಇನ್ನಷ್ಟು ಮುಂದಕ್ಕೆ
ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ. ಆದರೆ ಇದೀಗ ರಾಮ್ ಚರಣ್ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಆಗಿರುವ ಗಾಯ ಹಾಗೂ ಅದರಿಂದ ರಾಮ್ ಚರಣ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಂಭವ ಇದೆ. ಇದು ರಾಮ್ ಚರಣ್ ಅಭಿಮಾನಿಗಳಿಗೆ ತೀವ್ರ ಆತಂಕ ತಂದಿದೆ. ‘ಪೆದ್ದಿ’ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು….