ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ದೆಹಲಿ ಭೇಟಿ ಬಗ್ಗೆ ಡಿಕೆಶಿ ಅಚ್ಚರಿಯ ಹೇಳಿಕೆ – Kannada News | High Command Spoke to Me and Siddaramaiah: DK Shivakumar Makes Surprise Statement on Delhi Visit
ಬೆಂಗಳೂರು, ಡಿಸೆಂಬರ್ 20: ಹೈಕಮಾಂಡ್ ನನ್ನ ಪರವಾಗಿದೆ. ಎರಡೂವರೆ ವರ್ಷದ ಅಗ್ರಿಮೆಂಟೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದರು. ಈ ಮಾತು ಸದ್ಯ ಅವರ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜೊತೆಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹೈಕಮಾಂಡ್ಗೂ ಸಂದೇಶ ರವಾನೆ ಆಗಿದೆ. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡುವಂತೆ ಮಾಡಿದೆ. ದೆಹಲಿಗೆ ತೆರಳುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಮ್ಮಿಬ್ಬರಿಗೂ ಏನೋ ಹೇಳಿದೆ. ಹೈಕಮಾಂಡ್…