ಕಾಂಗ್ರೆಸ್ಗೆ ಹೊಸ ಸಂಕಷ್ಟ, ದೆಹಲಿಯ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ನೋಟಿಸ್
ನವದೆಹಲಿ, ಮಾರ್ಚ್ 25: ಕಾಂಗ್ರೆಸ್(Congress)ಗೆ ಹೊಸ ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಮಾಡಲಾಗಿದೆ. ಖಾಲಿ ಮಾಡಲು ಮಾರ್ಚ್ 28ರವರೆಗೆ ಅವಕಾಶ ನೀಡಲಾಗಿದೆ. ಪಕ್ಷವು ತನ್ನ ಕಾರ್ಯಾಚರಣೆಯನ್ನು ಈಗಾಗಲೇ ಐಟಿಒ ಬಳಿಯ ಇಂದಿರಾ ಭವನದಲ್ಲಿರುವ ತನ್ನ ಹೊಸ ಪ್ರಧಾನ ಕಚೇರಿಗೆ ಸ್ಥಳಾಂತರಿಸಿದ್ದರೂ ಸಹ, ಪ್ರಮುಖ ನಿರ್ಧಾರಗಳನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗುತ್ತಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಕ್ರಮವನ್ನು ಟೀಕಿಸಿ, ಇದನ್ನು…