nagaraj11081993

SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್ – Kannada News | Ishan Kishan’s Century Powers Jharkhand to Maiden Syed Mushtaq Ali Trophy Win

ಇಶಾನ್ ಕಿಶನ್ (Ishan Kishan) ನಾಯಕತ್ವದ ಜಾರ್ಖಂಡ್ ಕ್ರಿಕೆಟ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ, ಜಾರ್ಖಂಡ್ ತಂಡವು ಹರಿಯಾಣವನ್ನು 69 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ, ಜಾರ್ಖಂಡ್ ಮೊದಲ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಇಶಾನ್ ಕಿಶನ್…

Read More

ಬೈದಿದ್ದಕ್ಕೆ ಕ್ರಿಮಿನಾಶಕ ಸೇವಿಸಿ ಬಾಲಕ ಆತ್ಮಹತ್ಯೆ: ಹೆತ್ತವರು ಬುದ್ಧಿವಾದ ಹೇಳೋದೇ ತಪ್ಪಾ? – Kannada News | Hubballi: Son suicide after parents warn him excessive mobile phone use, urge focus on studies

ಹುಬ್ಬಳ್ಳಿ, ಡಿಸೆಂಬರ್​​ 19: ಮೊಬೈಲ್ (mobile)​ ಬಿಟ್ಟು ಓದಿನ ಕಡೆ ಗಮನಹರಿಸು ಎಂದಿದ್ದಕ್ಕೆ 16 ವರ್ಷದ ಮಗ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಅರುಣಗೌಡ ಮೃತ ಯುವಕ. ಮೃತ ಅರುಣಗೌಡ ಪ್ರಥಮ ಪಿಯುಸಿ ಓದುತ್ತಿದ್ದ. ಸದ್ಯ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಅರುಣಗೌಡ ಪೋಷಕರು ಮೊಬೈಲ್ ಬಿಟ್ಟು ಓದಿನ ಕಡೆ ಗಮನಹರಿಸಲು ಹೇಳಿದ್ದಾರೆ. ಹೆತ್ತವರು ಬುದ್ಧಿವಾದ ಹೇಳಿದ್ದಕ್ಕೆ ಆತ ಡಿಸೆಂಬರ್ 16ರಂದು ಕ್ರಿಮಿನಾಶಕ ಸೇವಿಸಿದ್ದ. ಬಳಿಕ…

Read More

ಪ್ರೇಮ ವಿವಾಹ ವಿಚಾರದಲ್ಲಿ ಜಗಳ, ಕೋಪದಲ್ಲಿ ವ್ಯಕ್ತಿಯ ಮೂಗು ಕತ್ತರಿಸಿದ ಜನ – Kannada News | Family Clash Over Love Marriage Turns Violent in Rajasthan

ಬಾರ್ಮರ್, ಡಿಸೆಂಬರ್ 19: ಪ್ರೇಮ ವಿವಾಹ(Love Marriage)ದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿರುವ ಘಟನೆ ರಾಜಸ್ಥಾನದ ಬಾರ್ಮರ್​ನಲ್ಲಿ ನಡೆದಿದೆ. ಘಟನೆಯಲ್ಲಿ ವರನ ಅಣ್ಣನ ಮೂಗನ್ನು ಹುಡುಗಿಯ ಮನೆಯವರು ಕತ್ತರಿಸಿರುವ ಅಮಾನವೀಯ ಘಟನೆ ಎದುರಾಗಿದೆ. ಮಹಿಳೆಯ ಕಡೆಯವರು ಮೊದಲು ಹಲ್ಲೆ ನಡೆಸಿದ್ದರು. ಆ ವ್ಯಕ್ತಿಯ ಅಣ್ಣನ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದರು. ಇದಕ್ಕೆ ಪ್ರತೀಕಾರವಾಗಿ, ಆ ವ್ಯಕ್ತಿಯ ಸಂಬಂಧಿಕರು ಮಹಿಳೆಯ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿ ಅವರ ಕಾಲು ಮುರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ….

Read More

ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ನುಗ್ಗೆಕಾಯಿ ಹತ್ತಿರಕ್ಕೂ ಹೋಗಬೇಡಿ – Kannada News | Drumstick Consumption: Who Should Be Cautious and Why

ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಈ ತರಕಾರಿ ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು ಇದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಂದಾಗಿ, ಇದನ್ನು ಕರಿ, ಸೂಪ್ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರ ಎಲೆಗಳು ಕೂಡ ನೈಸರ್ಗಿಕವಾಗಿ ಪ್ರೋಟೀನ್ ಅನ್ನು ಹೊಂದಿರುತ್ತವೆ. ನುಗ್ಗೆಕಾಯಿ ಕೂಡ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಉರಿಯೂತದ ಸಮಸ್ಯೆಗಳಿಗೆ…

Read More

ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​ ಹಿನ್ನೆಲೆ ರಸ್ತೆಗಿಳಿಯಲಿವೆ ಹೆಚ್ಚುವರಿ KSRTC ಬಸ್​​ಗಳು – Kannada News | KSRTC to Operate 1,000 Special Buses on the Occasion of Christmas

ಬೆಂಗಳೂರು, ಡಿಸೆಂಬರ್​​ 19: ಕ್ರಿಸ್ಮಸ್​​ ಹಿನ್ನೆಲೆ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಗುಡ್​​ನ್ಯೂಸ್​​ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.19, 20 ಮತ್ತು 24ರಂದು ಹೆಚ್ಚುವರಿಯಾಗಿ 1,000 ಬಸ್​​ಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ವಿಶೇಷ ಬಸ್‌ಗಳ ಸಂಚಾರ ನಡೆಯಲಿದ್ದು, ಸಾಮಾನ್ಯ ಸಾರಿಗೆ, ಐರಾವತ ಹಾಗೂ ಸ್ಲೀಪರ್ ಕೋಚ್ ಸೇರಿದಂತೆ ಎಲ್ಲಾ ಐಷಾರಾಮಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬ ಮುಗಿದ ಬಳಿಕವೂ ವಿಶೇಷ…

Read More

ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ

ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಮೊದಲ ದಿನ ಮೊದಲ ಶೋನ ದರ್ಶನ್ ಪತ್ನಿ ವಿಜಯಲಕ್​ಷ್ಮೀ ಹಾಗೂ ಮಗ ವಿನೀಶ್ ವೀಕ್ಷಣೆ ಮಾಡಿದ್ದರು. ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ಮೀನಾ ತೂಗುದೀಪ್ ಅವರು ಸಿನಿಮಾ ನೋಡಿದ್ದಾರೆ. ಮೈಸೂರಿನ ಡಿಆರ್​ಸಿ ಚಿತ್ರಮಂದಿರದಲ್ಲಿ ‘ಡೆವಿಲ್’ ವೀಕ್ಷಿಸಿದರು. ಅಭಿಮಾನಿಗಳು, ಸ್ನೇಹಿತರ ಜೊತೆ ಸಿನಿಮಾ ನೋಡಿದ್ದು ವಿಶೇಷ. ಸಿನಿಮಾ ನೋಡಿದ ಬಳಿಕ ಅವರು ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ಎಕ್ಸ್​ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್​ಗಳಲ್ಲಿ ಮೋದಿಯದ್ದೇ 8 – Kannada News | Narendra Modi’s 8 posts among the top 10 most liked tweets in last month

ನವದೆಹಲಿ, ಡಿಸೆಂಬರ್ 19: ಎಕ್ಸ್ ಸದ್ಯ ವಿಶ್ವದ ಅತಿ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯ ಕಿರು ಸಾಮಾಜಿಕ ಮಾಧ್ಯಮ ಎನಿಸಿದೆ. ಬಹಳ ಸುದ್ದಿಗಳು ಈ ಪ್ಲಾಟ್​ಫಾರ್ಮ್​ನಲ್ಲೇ ಸ್ಫೋಟಗೊಳ್ಳುತ್ತವೆ. ವಿಶ್ವದ ಬಹುತೇಕ ಸೆಲಬ್ರಿಟಿಗಳು ಎಕ್ಸ್​ನಲ್ಲಿ ಉಪಸ್ಥಿತಿ ಹೊಂದಿದ್ದಾರೆ. ಎಕ್ಸ್​ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ರಾಜಕಾರಣಿಗಳಲ್ಲಿ ನರೇಂದ್ರ ಮೋದಿಯೂ (Narendra Modi) ಒಬ್ಬರು. ಇವರು ಹಾಕುವ ಪೋಸ್ಟ್​ಗಳಿಗೆ ಸಿಗುವ ಲೈಕ್​ಗಳೇ ಇವರ ಜನಪ್ರಿಯತೆಗೆ ಅಳತೆಗೋಲೆನಿಸುತ್ತವೆ. ಕಳೆದ ಒಂದು ತಿಂಗಳಲ್ಲಿ ಎಕ್ಸ್​ನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್​ಗಳಲ್ಲಿ ಹೆಚ್ಚಿನವು…

Read More

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಭೈರತಿ ಬಸವರಾಜುಗೆ ಸಂಕಷ್ಟ, ಬಂಧನ ಭೀತಿ – Kannada News | Biklu Shiva Murder Case: High Court Rejects Anticipatory Bail for Byrati Basavaraj, Arrest Fear Looms

ಬೆಂಗಳೂರು, ಡಿಸೆಂಬರ್ 19: ರೌಡಿ ಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಭೈರತಿ ಬಸವರಾಜುಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಭೈರತಿ ಬಸವರಾಜು (Byrati Basavaraj) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಆದರೆ, ಪ್ರಕರಣಕ್ಕೆ ಕೋಕಾ (KCOCA) ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭೈರತಿ ಬಸವರಾಜು ಅವರು ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ…

Read More

ಅಕ್ರಮ BPL ಕಾರ್ಡ್​​ದಾರರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ: 3 ತಿಂಗಳಲ್ಲಿ ರದ್ದಾದ ಪಡಿತರ ಚೀಟಿಗಳೆಷ್ಟು? – Kannada News | Karnataka Government Cancels 15,000 Fake BPL Ration Cards

ಬೆಂಗಳೂರು, ಡಿಸೆಂಬರ್​​ 19: ಅಕ್ರಮವಾಗಿ ಬಿಪಿಎಲ್​​ ಕಾರ್ಡ್​​ ಹೊಂದಿರುವವರಿಗೆ ಆಹಾರ ಇಲಾಖೆ ಭರ್ಜರಿ ಶಾಕ್​ ಕೊಟ್ಟಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್​​ಗಳು ರಾಜ್ಯದಲ್ಲಿ ರದ್ದಾಗಿವೆ. 5,632 ಬಿಪಿಎಲ್ ಕಾರ್ಡ್​​ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕ ಅಮಾನತು ಮಾಡಲಾಗಿದೆ. ಬರೋಬ್ಬರಿ 3.90 ಲಕ್ಷ ಕಾರ್ಡ್​​ಗಳು ಎಪಿಎಲ್ ಆಗಿ ಬದಲಾಗಿವೆ. ಆ ಮೂಲಕ ಒಟ್ಟು 4.10 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. 4 ಲಕ್ಷ ಅಕ್ರಮ ಫಲಾನುಭವಿಗಳಿಗೆ ಶಾಕ್ 2025ರ ಸೆಪ್ಟೆಂಬರ್…

Read More

Yearly Horoscope 2026: 2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ – Kannada News | Gemini 2026 Yearly Horoscope: Astrological Predictions by Dr Basavaraj Guruji

ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ವರ್ಷ ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷವಾಗಲಿದೆ. ಈ ವರ್ಷ ಗುರು ಒಂದರಿಂದ ಎರಡನೇ ಸ್ಥಾನಕ್ಕೆ ಬರಲಿದ್ದು, ಜೂನ್ 2ರ ನಂತರ ಕರ್ಕಾಟಕ ರಾಶಿಗೆ (ಉಚ್ಚ ಗುರು) ಬರುವುದು ಶುಭಕರವಾಗಿದೆ. ಇದು ದ್ವಿತೀಯ ಸ್ಥಾನದಲ್ಲಿ ಧನ ಸ್ಥಾನ, ಕುಟುಂಬ ಸ್ಥಾನ ಮತ್ತು ವಾಕ್ ಸ್ಥಾನವನ್ನು ಬಲಪಡಿಸಿ, ಆರ್ಥಿಕ ಪ್ರಗತಿ, ಸಂಪತ್ತಿನ ಹೆಚ್ಚಳ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಶತ್ರುಗಳು ಮಿತ್ರರಾಗುತ್ತಾರೆ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಶನಿ…

Read More