ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು 18 ಕೋಟಿ ರೂ. ಟೋಲ್ ಕಟ್ಬೇಕಾ?
ಟೆಹ್ರಾನ್, ಮಾರ್ಚ್ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮಧ್ಯೆ, ಇರಾನ್(Iran) ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಜಾಗತಿಕ ವ್ಯಾಪಾರ ಮತ್ತು ಕಡಲ ಆರ್ಥಿಕತೆಯ ದಿಕ್ಕನ್ನು ಬದಲಾಯಿಸಬಹುದಾದ ಯೋಜನೆಯಲ್ಲಿ ಇರಾನ್ ಕಾರ್ಯನಿರ್ವಹಿಸುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ. ಸುಮಾರು 18 ಕೋಟಿ ರೂ. ಶುಲ್ಕ ಕಟ್ಟಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾರ್ಮುಜ್ ನೆಪ ಇಟ್ಟುಕೊಂಡು ಇರಾನ್ ಇಡೀ ಜಗತ್ತನ್ನು ಬ್ಲ್ಯಾಕ್ಮೇಲ್ ಮಾಡಲು ಮುಂದಾದಂತೆ…