ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೆಲವೇ ಡಾಲರ್ ಮಾತ್ರ
ನವದೆಹಲಿ, ಮಾರ್ಚ್ 22: ಯುದ್ಧದಿಂದ ಜರ್ಝರಿತವಾಗಿರುವ ಇರಾನ್ ಇದೀಗ ಆರ್ಥಿಕವಾಗಿ ದುಸ್ತರ ಪರಿಸ್ಥಿತಿಗೆ ಸಿಲುಕಿದೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಫಲವಾಗಿ ಇರಾನ್ನ ರಿಯಾಲ್ ಕರೆನ್ಸಿಯ ಮೌಲ್ಯ (Irani Rial notes) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿದಿದೆ. ಈ ಮಧ್ಯೆ ಇರಾನ್ ದೇಶವು 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟೊಂದನ್ನು ಬಿಡುಗಡೆ ಮಾಡಿದೆ. 10 ಮಿಲಿಯನ್ ಎಂದರೆ ಒಂದು ಕೋಟಿ ರಿಯಾಲ್ ಮುಖಬೆಲೆಯ ನೋಟು ಇದು. ಈ ಒಂದು ಕೋಟಿ ರಿಯಾಲ್ ನೋಟಿನ ಮೌಲ್ಯ ಕೇವಲ 7 ಡಾಲರ್…