Headlines

nagaraj11081993

ಶೂನ್ಯದಿಂದ ಆಸ್ತಿ ಸಂಪಾದನೆ ಮಾಡುವುದು ಹೇಗೆ? ಇಲ್ಲಿದೆ ತಿಳಿದಿರಬೇಕಾದ ಸಂಗತಿಗಳು

ಏನೂ ಬಂಡವಾಳ ಇಲ್ಲದೇ ಜನರು ಉನ್ನತ ಹಂತಕ್ಕೆ ಹೋಗಿರುವ ಉದಾಹರಣೆಗಳು ಹಲವಿವೆ. ಪಿತ್ರಾರ್ಜಿತ ಆಸ್ತಿ ಅಥವಾ ತಂದೆ ತಾಯಿಯ ಹಣದ ನೆರವು, ಮನೆ ಇತ್ಯಾದಿ ಯಾವ ಸೌಲಭ್ಯವೂ ಸ್ವಂತವಾಗಿ ಹಣ, ಆಸ್ತಿ ಸಂಪಾದನೆ ಮಾಡುವುದು ನಿಜಕ್ಕೂ ಸಾಧನೆಯೇ. ಈ ನಿಟ್ಟಿನಲ್ಲಿ ಯಾವುದೇ ವ್ಯಕ್ತಿಯ ಮೊದಲ ಮುಖ್ಯ ಅಂಶ ಆತನ ಸಂಪಾದನೆಯ ಶಕ್ತಿ. ಹಣ ಸಂಪಾದನೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಬಹಳ ಮುಖ್ಯ. ಹಣವಂತರಾಗಲು ಮೂರು ಅಂಶಗಳಿರಬೇಕು. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ….

Read More

‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ

ಪುನೀತ್ ರಾಜ್​​ಕುಮಾರ್ (Puneeth Rajkumar) ಮತ್ತು ರಮ್ಯಾ ನಟನೆಯ ‘ಆಕಾಶ್’ ಸಿನಿಮಾ ಬಿಡುಗಡೆ ಆಗಿ 21 ವರ್ಷಗಳಾಗಿವೆ. ಇತ್ತೀಚೆಗಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿತ್ತು. ನಟಿ ರಮ್ಯಾ ಸಹ ‘ಆಕಾಶ್’ ಸಿನಿಮಾದ ಮರು ಬಿಡುಗಡೆ ಶೋಗೆ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ನಟಿ ರಮ್ಯಾ ಅವರು ‘ಆಕಾಶ್’ ಸಿನಿಮಾದ ಶೂಟಿಂಗ್​​ನ ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್​​ಕುಮಾರ್, ಅಶ್ವಿನಿ ಪುನೀತ್ ರಾಜ್​​ಕುಮಾರ್, ರಾಘಣ್ಣ, ರಾಜ್​​ಕುಮಾರ್, ಪಾರ್ವತಮ್ಮ, ಯುವ, ವಿನಯ್ ರಾಜ್​​ಕುಮಾರ್, ಮಹೇಶ್ ಬಾಬು ಇನ್ನೂ…

Read More

ಇಸ್ರೇಲ್ ದಾಳಿಯಲ್ಲಿ ನಮ್ಮ ದೇಶದ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಹತ್ಯೆ; ಇರಾನ್ ಸ್ಪಷ್ಟನೆ

ನವದೆಹಲಿ, ಮಾರ್ಚ್ 18: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು “ಹೇಡಿತನದ ಹತ್ಯೆ” ಎಂದು ಕರೆದಿದ್ದಾರೆ. ಇಸ್ರೇಲ್ ತನ್ನ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ ಎಸ್ಮಾಯಿಲ್ ಅವರನ್ನು ಹತ್ಯೆ ಮಾಡಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ (Iran War) ಕೂಡ ಈ ಬಗ್ಗೆ ದೃಢಪಡಿಸಿದೆ….

Read More

ನೆಲಮಂಗಳದಲ್ಲಿ ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್

ಬೆಂಗಳೂರು, (ಮಾರ್ಚ್ 18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಬೇಸಿಗೆ ಮಳೆಯ ಅಬ್ಬರ ಶುರುವಾಗಿದೆ. ನಿನ್ನೆ (ಮಾರ್ಚ್ 17) ಬೆಂಗಳೂರಿನ ಈ ವರ್ಷದ ಮಾಳೆಯಾಗಿದ್ದು, ಇಂದು (ಮಾರ್ಚ್ 18) ಸಹ ಮುಂದುವರೆದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆ ಶುರುವಾಗಿದ್ದು, ಭಾರೀ ಬಿರುಗಾಳಿ ಮಳೆಗೆ ನೆಲಮಂಗಲ ನಗರದಲ್ಲಿ ನೇಮ್ ಬೋರ್ಡ್ ಪಿಲ್ಲರ್ ಧರೆಗುರುಳಿದಿದೆ. ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ನಗರಸಭೆಯಿಂದ ನಿರ್ಮಾಣ ಮಾಡಿದ್ದ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ…

Read More

ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ

‘ಸ್ಪೈಡರ್​​ಮ್ಯಾನ್’ (Spiderman) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಸೂಪರ್ ಹೀರೋ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದ ಸಿನಿಮಾ. ‘ಸ್ಪೈಡರ್​​ಮ್ಯಾನ್​’ನ ಹಲವು ಆವೃತ್ತಿಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೆಸರಿನ ಸಿನಿಮಾ ಇದಾಗಿದ್ದು, ಟ್ಯಾಗ್​ಲೈನ್​​ನಲ್ಲಿಯೇ…

Read More

ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಬೆಂಗಳೂರು, ಮಾರ್ಚ್​ 18: ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಾಕಿ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯುಗಾದಿ (Ugadi) ಹಬ್ಬದ‌ ರಜೆಯನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ. ಯುಗಾದಿ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಸೂಚನೆ ಕರ್ನಾಟಕ ವಿಧಾನ ಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾರ್ಚ್​​ 23ರಂದು ಕಂದಾಯ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳು ಬಾಕಿಯಿರುವುದರಿಂದ ಸರ್ಕಾರದ ಅಪರ ಮುಖ್ಯ…

Read More

Hockey World Cup 2026: ಒಂದೇ ಗುಂಪಿನಲ್ಲಿ ಭಾರತ- ಪಾಕಿಸ್ತಾನ

ಫೆಬ್ರವರಿ 15 ರಂದು ನಡೆದ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಎರಡು ದೇಶಗಳ ತಂಡಗಳು ಪರಸ್ಪರ ಎದುರುಬದುರಾಗುತ್ತಿವೆ. ಆದರೆ ಈ ಬಾರಿ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಿಗೆ ಹಾಕಿ ಮೈದಾನದಲ್ಲಿ. 2026 ರ ಎಫ್‌ಐಎಚ್ ಹಾಕಿ ವಿಶ್ವಕಪ್ (Hockey World Cup 2026) ಪಂದ್ಯಾವಳಿ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಪಂದ್ಯಾವಳಿ…

Read More

ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ಗಾಜಿಯಾಬಾದ್, ಮಾರ್ಚ್ 18: ರಜೆ ನಿರಾಕರಿಸಿದ ಕಾರಣದಿಂದ ಮತ್ತು ಸಂಬಳವನ್ನು ಕಡಿತ ಮಾಡಿದ್ದರಿಂದ ಕೋಪಗೊಂಡ ಸೆಕ್ಯುರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಗಾಜಿಯಾಬಾದ್‌ನ ಗಡಿಯ ಸಮೀಪವಿರುವ ಬಲರಾಮ್ ನಗರದಲ್ಲಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಶಾಖೆಯಲ್ಲಿ ಸೋಮವಾರ (ಮಾರ್ಚ್ 17) ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಬ್ಯಾಂಕ್ ಮ್ಯಾನೇಜರ್ ಅನ್ನು ಬಿಹಾರದ ಪಾಟ್ನಾದ ಅಭಿಷೇಕ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಸಾಹಿಬಾಬಾದ್ ಬಳಿಯ ಭೋಪ್ರಾದಲ್ಲಿ ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶಂಕಿತ ಗಾರ್ಡ್…

Read More

ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಕೊಪ್ಪಳ, (ಮಾರ್ಚ್ 18): ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕಾಲುವೆಗೆ ಜಲಾಶಯದ ಅಧಿಕಾರಿಗಳು ನೀರು ಬಿಟ್ಟಿದ್ದರು. ಒಟ್ಟು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ನೀರು ಬಿಡಲಾಗಿತ್ತು. ಆದರೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಕಾಲುವೆ ಒಡೆದಿದ್ದು, ನೀರು ಪಕ್ಕದ ಜಮೀನು ಹಾಗೂ ರೆಸಾರ್ಟ್ ಗಳಿಗೆ ನೀರು ನುಗ್ಗಿದೆ. ಇನ್ನು ಇದೇ ವೇಲೆ ಸ್ಥಳೀಯರ ಬಲೆಗೆ…

Read More

ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಒಣ ಕೆಮ್ಮಿನ ಸಮಸ್ಯೆ: ತಡೆಗಟ್ಟಲು ಈ ಸಲಹೆ ಪರಿಣಾಮಕಾರಿ

ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದೆ. ಬೆಳಿಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆ ತಂಪಾದ ವಾತಾವರಣ ಇನ್ನು ಕೆಲವು ಕಡೆಗಳಲ್ಲಿ ಮಳೆ ಇರುವುದರಿಂದ ದೇಹಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕರಲ್ಲಿ ಒಣ ಕೆಮ್ಮಿನ (Dry Cough) ಸಮಸ್ಯೆ ಹೆಚ್ಚಾಗುತ್ತಿದೆ. ಹವೆಯಲ್ಲಿ ಇರುವ ಧೂಳು, ಹೊಗೆ, ಸಣ್ಣ ಸಣ್ಣ ಕಣಗಳು ಮತ್ತು ಮಾಲಿನ್ಯ ಕೆಮ್ಮನ್ನು ಪ್ರೇರೇಪಿಸುತ್ತವೆ. ಅದರಲ್ಲಿಯೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಸಮಸ್ಯೆಯನ್ನು ಸಮಯಕ್ಕೆ…

Read More