Headlines

nagaraj11081993

ಮಾಜಿ ಆಪ್ತರಿಂದಲೇ ಪ್ರಜ್ವಲ್​​ ರೇವಣ್ಣಗೆ ಖೆಡ್ಡಾ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​

ಹಾಸನ, ಮಾರ್ಚ್​​ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಇರುವ ಪೆನ್​​ಡ್ರೈವ್​​ ಹಂಚಿಕೆ ಪ್ರಕರಣ ಸಂಬಂಧ 2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಎಸ್​​ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಹಾಸನದ ಸಿವಿಲ್​​ ಕೋರ್ಟ್​​ಗೆ ಸಲ್ಲಿಸಲಾಗಿರುವ ಒಟ್ಟು 13,712 ಪುಟಗಳ ಚಾರ್ಜ್​​ಶೀಟ್​​ನಲ್ಲಿ ಕೆಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ. ಮಾಜಿ ಆಪ್ತರೇ ತೋಡಿದ್ದ ಖೆಡ್ಡಾಗೆ ಪ್ರಜ್ವಲ್​​ ರೇವಣ್ಣ ಬಿದ್ದಿದ್ದಾರೆ….

Read More

ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ಭಾರಿ ವಿವಾದಕ್ಕೆ ಕಾರಣ ಆಗಿರುವ ‘ಕೆಡಿ’ (KD) ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಬಗ್ಗೆ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ವರ್ಷನ್ (Sarke Chunar Teri Sarke) ಹಾಡನ್ನು ಕೂಡಲೇ ಡಿಲೀಟ್ ಮಾಡಲಾಯಿತು. ಇಷ್ಟೆಲ್ಲ ವಿವಾದ ಆಗಿದ್ದಕ್ಕೆ ನಟಿ ನೋರಾ ಫತೇಹಿ (Nora Fatehi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ…

Read More

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ

ನವದೆಹಲಿ, ಮಾರ್ಚ್ 18: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ನಿಂತಿಲ್ಲ. ಅತ್ತ ಇರಾನ್ ಕೂಡ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳಿಗೆ ಹಾನಿಯಾಗಿದ್ದು ಬಿಟ್ಟರೆ ಅಮೆರಿಕ ದೇಶದ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ, ಇಸ್ರೇಲ್ ಮತ್ತು ಇರಾನ್ ಅಕ್ಷರಶಃ ಸ್ಮಶಾನದಂತಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ವಿರುದ್ಧ ಬೇರೆ ದೇಶಗಳು ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಘೋಷಿಸಿದ್ದರು. ಇರಾನ್…

Read More

ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳಿರುವಾಗ ‘ಧುರಂಧರ್’​ ನಿರ್ದೇಶಕ ಹೇಳಿದ್ದೇನು?

‘ಧುರಂಧರ್ 2’ (Dhurandhar 2) ಸಿನಿಮಾದ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ರಣವೀರ್ ಸಿಂಗ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ನಾಳೆ (ಮಾರ್ಚ್ 19) ಬಿಡುಗಡೆಯಾಗುತ್ತಿದೆ. ಆದರೆ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಇಂದೇ ಪ್ರದರ್ಶನಗೊಳ್ಳಲಿದ್ದು, ಪ್ರೀಮಿಯರ ಶೋನ ಲಕ್ಷಾಂತರ ಟಿಕೆಟ್​​ಗಳು ಮುಂಗಡವಾಗಿ ಮಾರಾಟವಾಗಿವೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಂಜೆ ಐದು ಗಂಟೆಯಿಂದ ‘ಧುರಂಧರ್ 2’ ಸಿನಿಮಾದ ಶೋಗಳ ಪ್ರದರ್ಶನ ಆರಂಭವಾಗಲಿದೆ. ಸಿನಿಮಾದ ಮೊದಲ ಶೋ ಪ್ರಾರಂಭಕ್ಕೆ ಕೆಲವೇ…

Read More

2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಪೇಯಸಿಗೆ ಮಾಡಿದ್ದೇನು ಗೊತ್ತಾ?

ಬೆಳಗಾವಿ, ಮಾರ್ಚ್​ 18: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದು (Assault), ಅಷ್ಟೇ ಅಲ್ಲದೆ ಆಕೆಯ ತಂದೆ, ತಾಯಿ ಮೇಲೂ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ  ಜೋಡಕುರಳಿಯಲ್ಲಿ ನಡೆದಿದೆ. ವಿದ್ಯಾಶ್ರೀ ಕಿಲಾರಿ ಮೇಲೆ ಬೀರಪ್ಪ ರಾಮಪ್ಪ ಕಜ್ಜನ್ನವರ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಎರಡು ವರ್ಷಗಳಿಂದ ವಿದ್ಯಾಶ್ರೀ ಮದುವೆ ಮಾಡಿಕೊಡುವಂತೆ ಬೀರಪ್ಪ ರಾಮಪ್ಪ ಕಜ್ಜನ್ನವರ ದುಂಬಾಲು ಬಿದ್ದಿದ್ದ. ಆದರೆ ಬೀರಪ್ಪನಿಗೆ…

Read More

ಡಿಜೆ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲ್!

ಬೆಂಗಳೂರು, (ಮಾರ್ಚ್ 18): ಕರ್ನಾಟಕದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಹಾಕುವ ಡಿಜೆಗಳನ್ನು (DJ) ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡಿಜೆ ಬಳಕೆ ನಿಷೇಧಿಸಿ ಎಂದ ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ಕೊಟ್ಟ ಬಿಜೆಪಿ ಸದಸ್ಯ ಚನ್ನಬಸಪ್ಪ ಡಿಜೆ ಮಾತ್ರ ಏಕೆ ನಿಷೇಧ ಹೇರಬೇಕು, ಸುಪ್ರೀಂ ಕೋರ್ಟ್‌ ಆದೇಶದಂತೆ ಆಝಾನ್ ಬ್ಯಾನ್ ಮಾಡ್ತಿರಾ ಎಂದು ತಿರುಗೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಸುಪ್ರೀಂ ಆದೇಶ…

Read More

ಗ್ರಾಮಾಂತರ ಪ್ರದೇಶದಲ್ಲಿ ಮನೆಗಳ ಮೇಲೆ ಹಾಕಿದ ಜಾಹೀರಾತಿಗೂ ತೆರಿಗೆ!: ವಿಪಕ್ಷಗಳಿಂದ ತೀವ್ರ ವಿರೋಧ

ಬೆಂಗಳೂರು, ಮಾರ್ಚ್​​ 18: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್​ನಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ-2026 ಅಂಗೀಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆಗೆ ಹಾಕಿದ ಜಾಹೀರಾತಿಗೂ ತೆರಿಗೆ ವಿಧಿಸಲು ಮುಂದಾಗಿದ್ದು, ಜೀವನಕ್ಕೆ ಏನೋ ಮಾಡಿಕೊಂಡಿರುವವರಿಗೂ ಟ್ಯಾಕ್ಸ್​​ ಹಾಕುವಷ್ಟು ಸರ್ಕಾರ ಬರಗೆಟ್ಟಿದ್ಯಾ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ರಾಜಕಾರಣಿಗಳು ಫ್ಲೆಕ್ಸ್ ಹಾಕ್ತಾರೆ, ಅವರಿಗೆ ಯಾವುದೇ ಟ್ಯಾಕ್ಸ್ ಇಲ್ಲ. ಹೀಗಿರುವಾಗ ಖಾಸಗಿಯಾಗಿ ಮನೆ ಮೇಲೆ ಜಾಹೀರಾತು ಹಾಕಿಕೊಂಡ್ರೆ ನಿಮಗೇನು?…

Read More

ಪಿಸಿ ಶೇಖರ್ ಜೊತೆ ಕೈ ಜೋಡಿಸಿದ ‘ಲ್ಯಾಂಡ್‌ಲಾರ್ಡ್’ ನಿರ್ಮಾಕರ ಕೆವಿ ಸತ್ಯಪ್ರಕಾಶ್

ಯುಗಾದಿ ಎಂದರೆ ಹೊಸ ವರ್ಷ. ಆ ಪ್ರಯುಕ್ತ ಚಿತ್ರರಂಗದಲ್ಲಿ (Kannada Film Industry) ಕೂಡ ಹೊಸ ಉತ್ಸಾಹ ಮೂಡುತ್ತಿದೆ. ಹೊಸ ವರ್ಷಕ್ಕೆ ಅನೇಕ ಹೊಸ ಸಿನಿಮಾಗಳ ಅನೌನ್ಸ್‌ ಆಗುತ್ತಿವೆ. ಯುಗಾದಿ ಸಂಭ್ರಮದಲ್ಲಿ ನಿರ್ದೇಶಕ ಪಿಸಿ ಶೇಖರ್‌ (PC Shekar) ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ರಾಗ’, ‘ರೊಮಿಯೋ’ ಮುಂತಾದ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಪಿಸಿ ಶೇಖರ್ ಈಗ ತಮ್ಮ ಹೊಸ ಸಿನಿಮಾಗೆ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಬಾರಿ ಪಿಸಿ ಶೇಖರ್ ಜೊತೆ ‘ಸಾರಥಿ’, ‘ಲ್ಯಾಂಡ್‌ಲಾರ್ಡ್’…

Read More

ಯುಗಾದಿಯ ನಂತರ ಈ ರಾಶಿಯ ಯೋಗ, ಭಾಗ್ಯ, ಭೋಗ ನಾಶ!: ಆದರೆ ಗುರು ಬಲಕ್ಕಾಗಿ ಈ ಒಂದು ಕೆಲಸ ಮಾಡಬೇಕು

ಹೊಸ ವರ್ಷದ ಆರಂಭದಲ್ಲಿ ಅಂದರೆ ಸೂರ್ಯೋದಯದ ಕಾಲದಲ್ಲಿ ಗ್ರಹಗತಿಗಳು ಹೇಗಿರುತ್ತವೋ ಹಾಗೆ ವರ್ಷಪೂರ್ತಿ ಅದರ ಪ್ರಭಾವ ಇರುತ್ತದೆ. ಇಂದು ಮುಖ್ಯವಾಗಿ ಮೀನ ರಾಶಿಯಲ್ಲಿ ಸೂರ್ಯ, ಚಂದ್ರ, ಶುಕ್ರ ಮತ್ತು ಶನಿ ಸೇರಿರುವ ಅಸಾಧಾರಣ ಗ್ರಹಗತಿಗಳನ್ನು ಆಧರಿಸಿದೆ. ಗುರುವಾರವಾದ ಕಾರಣ ಗುರುವು ಲಗ್ನದಿಂದ ಚತುರ್ಥ ಸ್ಥಾನದಲ್ಲಿ ಇದ್ದಾನೆ. ​ಈ ವರ್ಷವು ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಮತ್ತು ಹೊಸ ಆರಂಭಗಳನ್ನು ತರುವ ಸೂಚನೆ ನೀಡುತ್ತಿದೆ. ಲಗ್ನ ಮತ್ತು ರಾಶಿ ಎರಡೂ ಮೀನವಾಗಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ದೈವಿಕ ಚಿಂತನೆ ಮತ್ತು…

Read More

ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ (Rajya Sabha) ಬುಧವಾರ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ಹಾಸ್ಯಮಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ (HD Deve Gowda) ಶುಭ ಹಾರೈಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ಅವರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ, ವ್ಯಂಗ್ಯಭರಿತ ಮಾತನ್ನಾಡಿದ್ದು, ಸದನವನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಮಾಜಿ…

Read More