ಕರಾವಳಿ ಕಥೆಯ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡು
ಕರಾವಳಿ ಭಾಗದ ಕಥೆ ಹೊಂದಿರುವ ಸಿನಿಮಾಗಳಿಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಸಿನಿಮಾಗಳ ಸಾಲಿಗೆ ‘ಮ್ಯಾರೇಜ್ ಪಾರ್ಟಿ’ (Marriage Party) ಕೂಡ ಸೇರ್ಪಡೆ ಆಗಲಿದೆ. ಈ ಮೊದಲು ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ‘ಅಧಿಪತ್ರ’ ಸಿನಿಮಾದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದ ಚಯನ್ ಶೆಟ್ಟಿ ಅವರು ಈಗ ‘ಮ್ಯಾರೇಜ್ ಪಾರ್ಟಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿರಲಿದ್ದು, ಹಲವು ಹಾಸ್ಯ ಕಲಾವಿದರು ಅಭಿನಯಿಸುತ್ತಿದ್ದಾರೆ. ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು (Prakash Thuminad),…