Video: ಬಂಗೀ ಜಂಪ್ ವೇಳೆ ಹಗ್ಗ ಕಟ್ಟಲು ಮರೆತ ಟ್ರೈನರ್, ಯುವತಿ ಸಾವು – Kannada News | Adventure Turns Tragic as 21 Year Old Student Dies in 40 Metre Rope Jump Fall
ಸಾವೊ ಪಾಲೊ, ಜೂನ್ 14: ಬಂಗೀ ಜಂಪಿಂಗ್ ವೇಳೆ ತರಬೇತುದಾರ ಹಗ್ಗ ಕಟ್ಟುವುದನ್ನು ಮರೆತ ಪರಿಣಾಮ ಯುವತಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬ್ರೆಜಿಲ್ನ ಸಾವೊ ಪಾಲೊ ರಾಜ್ಯದ ಲಿಮೈರಾ ನಗರದಲ್ಲಿ ನಡೆದಿದೆ. 21 ವರ್ಷದ ಯುವತಿ ಮಾರಿಯಾ ಎಡ್ವರ್ಡಾ ಟ್ರೈನರ್ ಲೋಪದಿಂದಾಗಿ ಬಂಗೀ ಜಂಪ್ ಮಾಡುವಾಗ ಬಿದ್ದು ಮೃತಪಟ್ಟ ಬೆನ್ನಲ್ಲೇ ಬ್ರೆಜಿಲ್ ಮಿಲಿಟರಿ ಪೊಲೀಸರು ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಯೋಜಕರು ಮತ್ತು ಜವಾಬ್ದಾರರ ತಂಡವನ್ನು ಪೊಲೀಸರು…