Viral Video: ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬರೀ ಟವೆಲ್ ಸುತ್ತಿ ವಿದ್ಯಾರ್ಥಿನಿಯರ ಬೋಲ್ಡ್ ಡ್ಯಾನ್ಸ್; ವಿಡಿಯೋ ವೈರಲ್
ಕೋಲ್ಕತ್ತಾ: ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಂಪ್ರದಾಯವನ್ನು ಬಿಂಬಿಸುವ ವೇದಿಕೆಗಳಾಗಿರುತ್ತವೆ. ಆದರೆ, ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ನಡೆದ ವಿಲಕ್ಷಣ ಪ್ರದರ್ಶನವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದೆ. ಸೋಶಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಏನಿದು ಘಟನೆ? ಕೋಲ್ಕತ್ತಾದ ಜೀಬನ್ ಜ್ಯೋತಿ ಮಾದರಿ ಶಾಲೆಯಲ್ಲಿ (Jeeban Jyoti Model School) ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಶಾಲಾ ವಿದ್ಯಾರ್ಥಿನಿಯರು ಟವೆಲ್ ಸುತ್ತಿ ವೇದಿಕೆಯ…