Headlines

nagaraj11081993

Video: ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ

ಕೆಲವೊಮ್ಮೆ ಜನರು ದಿಢೀರನೆ ಫೇಮಸ್ ಆಗಲು ಅದೇನೆಲ್ಲಾ ಮಾಡುತ್ತಾರೆ ನೋಡಿ, ಇತ್ತೀಚೆಗಷ್ಟೇ ತಾಯಿಯೊಬ್ಬರು ಬಾವಿಯ ಕಟ್ಟೆಯ ಮೇಲೆ ನಿಂತು ತನ್ನ ಇಬ್ಬರು ಮಕ್ಕಳ ಕೈ ಹಿಡಿದು ನೃತ್ಯ ಮಾಡುವ ವಿಡಿಯೋ ವೈರಲ್ ಆಗಿತ್ತು., ಈಗ ಇಲ್ಲೊಬ್ಬ ಮಹಿಳೆ ತನ್ನ ಮಗುವನ್ನು ಬೈಕಿನ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆ ತನ್ನ ಮಗುವನ್ನು ಸ್ಕೂಟರ್‌ನ ಸ್ಟೋರೇಜ್ ವಿಭಾಗದಲ್ಲಿ ಇರಿಸಿ ಸ್ಕೂಟರ್ ಓಡಿಸುವುದನ್ನು ನೋಡಬಹುದು. ಮುಚ್ಚಿದ ಡಿಕ್ಕಿಯೊಳಗೆ ಉಸಿರಾಡಲು ಮಗುವಿಗೆ ತೊಂದರೆಯಾಗಬಹುದು ಎಂದು ಈ ವಿಡಿಯೋ…

Read More

Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಯಾದಗಿರಿ, ಮಾರ್ಚ್​ 13: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಇದೀಗ ಗಲ್ಫ್ ರಾಷ್ಟ್ರಗಳ ಮೇಲಷ್ಟೇ ಅಲ್ಲದೆ ಭಾರತದ ಕೆಲವು ಉದ್ಯಮಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೆ ಬೆಂಗಳೂರು ಸೇರಿ ದೇಶದ ಹಲವೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ (LPG cylinder crisis) ಕೊರತೆ ತಲೆಯಿತ್ತಿದೆ. ಅದಲ್ಲದೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಅಕ್ಕಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ರೈಸ್ ಮಿಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಹಲವಾರು ಮಿಲ್‌ಗಳು ಬಂದ್ ಆಗುವ…

Read More

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್​​​ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್​​​ನಲ್ಲಿ ಕಾವ್ಯಾ ಅವರ ಸನ್​​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್​ ಅವರನ್ನು ಖರೀದಿ ಮಾಡಿತು. ಆಕ್ಷನ್​ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್​​ರೈಸರ್​ಸ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ. ಮಾರ್ಚ್ 12ರ ರಾತ್ರಿ 8.30ಕ್ಕೆ ವೇಳೆಗೆ ಈ…

Read More

ಹುಬ್ಬಳ್ಳಿಯಲ್ಲಿ ಆಟೋ ಗ್ಯಾಸ್ ಬಂಕ್ ಬಂದ್: ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ

ಹುಬ್ಬಳ್ಳಿ, ಮಾರ್ಚ್ 13: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಎಲ್​ಪಿಜಿ ಪೂರೈಕೆ ವ್ಯತ್ಯಯವಾಗಿದ್ದು, ಆಟೋ ಚಾಲಕರಿಗೂ ಇದರ ಬಿಸಿ ತಟ್ಟಿದೆ. ಹುಬ್ಬಳ್ಳಿಯಲ್ಲಿ ಆಟೋ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗಿವೆ. ಎಲ್‌ಪಿಜಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋ ಚಾಲಕರು ಪ್ರಯಾಣದ ದರವನ್ನು ಹೆಚ್ಚಿಸಿದ್ದಾರೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಚೆನ್ನಮ್ಮ ವೃತ್ತದಿಂದ ಇಂಡಿ ಪಂಪ್‌ಗೆ ಹಿಂದೆ 10 ರೂಪಾಯಿ ಇದ್ದ ದರವನ್ನು ಈಗ 15 ರೂಪಾಯಿಗೆ ಏರಿಸಲಾಗಿದೆ. ಇದಲ್ಲದೆ,…

Read More

ಪ್ರೇಮ್ ರಕ್ಷಿತ್ ಬೆನ್ನು ತಟ್ಟಿದ ಲಿಜೆಂಡರಿ ಕೊರಿಯೋಗ್ರಾಫರ್ ವಿನ್ಸೆಂಟ್

‘ಕಿಂಗ್ ಆಫ್ ಪಾಪ್’ ಮೈಖಲ್ ಜಾಕ್ಸನ್ (Michael Jackson), ಇಂದು ಲಿಜೆಂಡರಿ ಎನಿಸಿಕೊಂಡಿರುವ ಎಷ್ಟೋ ಮಂದಿ ಖ್ಯಾತ ಪಾಪ್ ತಾರೆಯವರಿಗೆ, ಡ್ಯಾನ್ಸ್ ಮಾಸ್ಟರ್​​ಗಳಿಗೆ ಗುರು. ಅಂಥಹಾ ಮೈಖಲ್ ಜಾಕ್ಸನ್ ಅವರಿಗಾಗಿ ನೃತ್ಯ ನಿರ್ದೇಶನ ಮಾಡುತ್ತಿದ್ದ ಹಾಲಿವುಡ್​ನ ಲಿಜೆಂಡರಿ ನೃತ್ಯ ನಿರ್ದೇಶಕ ಅಥವಾ ಕೊರಿಯೋಗ್ರಾಫರ್ ಇದೀಗ ಭಾರತದ ಜನಪ್ರಿಯ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್ ಅವರ ಕೆಲಸ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ, ಅವರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾದ ‘ನಾಟು-ನಾಟು’ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವ…

Read More

Friday Born Luck: ಶುಕ್ರವಾರ ಜನಿಸಿದವರ ಬಗೆಗಿನ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನಕ್ಕೂ ತನ್ನದೇ ಆದ ವಿಶೇಷತೆ ಇರುತ್ತದೆ. ಅದರಲ್ಲಿಯೂ ಶುಕ್ರವಾರ ಹುಟ್ಟಿದವರು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ಪಡೆದವರು ಎಂಬ ನಂಬಿಕೆಯಿದೆ. ಶುಕ್ರವಾರ ಜನಿಸಿದ ಪುರುಷ ಮತ್ತು ಮಹಿಳೆಯರ ಸ್ವಭಾವ, ವೃತ್ತಿಜೀವನ ಮತ್ತು ಯಶಸ್ಸಿನ ಸೂತ್ರಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ. ಅಕ್ಷಯ ಸಂಪತ್ತಿನ ಒಡೆಯರು: ಶುಕ್ರವಾರ ಜನಿಸಿದವರ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅವರ ಆರ್ಥಿಕ ಸ್ಥಿತಿ. ಇವರು ಶ್ರೀಮಂತ ಕುಟುಂಬದಲ್ಲಿ ಜನಿಸದೇ ಇದ್ದರೂ, ತಮ್ಮ ಸ್ವಪ್ರಯತ್ನ ಮತ್ತು ಅದೃಷ್ಟದಿಂದ ಜೀವನದಲ್ಲಿ…

Read More

ಯಾದಗಿರಿಯಲ್ಲಿ ಹೋಟೆಲ್​ಗಳ ಮೇಲೆ ದಿಢೀರ್ ದಾಳಿ: ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ

ಯಾದಗಿರಿ, ಮಾರ್ಚ್ 13: ಕರ್ನಾಟಕದ ಯಾದಗಿರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾರ್ಚ್ 12 ರಂದು ಹೋಟೆಲ್‌ಗಳ ದಿಢೀರ್ ದಾಳಿ ನಡೆಸಿ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸಲಾಗುತ್ತಿದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 46 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಈ ದಾಳಿ…

Read More

ಬೆಂಗಳೂರಿನಲ್ಲಿ ಇವಿ ಬೈಕ್ ಸ್ಕ್ಯಾಮ್! ಕೋಟ್ಯಾಂತರ ರೂ. ವಂಚಿಸಿ ಸಿಕ್ಕಿಬಿದ್ರು ಆರೋಪಿಗಳು

ಬೆಂಗಳೂರು, ಮಾರ್ಚ್​ 13: ಇವಿ ಬೈಕ್ (EV Bike) ಮಾರಾಟದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಕೇಶ್ ಹಾಗೂ ಹನುಮಂತರಾಜು ಬಿಲ್ಕರ್ ಎಂದು ಗುರುತಿಸಲಾಗಿದೆ. ರಾಕೇಶ್​ನನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದು, ಹನುಮಂತರಾಜು ಬಿಲ್ಕರ್​ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಮೋದಿ ಸ್ಕೀಮ್ ಹೆಸರಿನಲ್ಲಿ ವಂಚನೆ ಮೋದಿ ಸ್ಕೀಮ್ ಹೆಸರಿನಲ್ಲಿ 3250 ಇವಿ ಬೈಕ್ ಮಾರಾಟ ಮಾಡುವ ನೆಪದಲ್ಲಿ ಸುಮಾರು…

Read More

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?

ನೆಟ್​ಫ್ಲಿಕ್ಸ್ (Netflix), ವಿಶ್ವದ ಒಟಿಟಿ ದೈತ್ಯ. ನೆಟ್​​ಫ್ಲಿಕ್ಸ್​​ಗಿಂತಲೂ ಹೆಚ್ಚು ಕಂಟೆಂಟ್ ಹೊಂದಿರುವ, ಹೆಚ್ಚು ಸಬ್​​ಸ್ಕ್ರೈಬರ್​​ಗಳನ್ನು ಹೊಂದಿರುವ ಒಟಿಟಿಗಳು ಇವೆಯಾದರೂ ನೆಟ್​ಫ್ಲಿಕ್ಸ್​​ನಷ್ಟು ಲಾಭದಾಯಕ ಒಟಿಟಿ ಇನ್ಯಾವುದೂ ಸಹ ಇಲ್ಲ. ಇತ್ತೀಚೆಗಷ್ಟೆ ಲಕ್ಷಾಂತರ ಕೋಟಿ ಕೊಟ್ಟು ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು ನೆಟ್​ಫ್ಲಿಕ್ಸ್. ಈ ಒಟಿಟಿ ದೈತ್ಯ, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್​​ಫ್ಲಿಕ್ಸ್​ಗೆ ಇದ್ದು,…

Read More

ಸಣ್ಣದೊಂದು ಮನಸ್ಥಾಪ, ಪತ್ನಿಗೆ ಬೆಂಕಿ ಹಚ್ಚಿ ಕೊಂದ ಗಂಡ

ಕೋಲ್ಕತ್ತಾ, ಮಾರ್ಚ್​ 13: ಸಣ್ಣದೊಂದು ಮನಸ್ಥಾಪಕ್ಕೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿ  ಕೊಲೆ(Murder) ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ  ನರ್ಸ್ ಒಬ್ಬರು ಕಾರಿನ ಇಎಂಐ ಪಾವತಿಗೆ ಸಂಬಂಧಿಸಿದ ಜಗಳದಲ್ಲಿ ಪತಿಯ ಕೈಯಿಂದಲೇ ಸಾವನ್ನಪ್ಪಿದ್ದಾರೆ. ಕೂಚ್ ಬೆಹಾರ್‌ನಲ್ಲಿರುವ ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಛಂದಾ ರಾಯ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಛಂದಾ ಮನೆಯಿಂದ ಕೂಗುತ್ತಾ ಹೊರಗೆ ಓಡಿಹೋಗಿದ್ದಳು, ಬೆಂಕಿ ಹೊತ್ತಿಕೊಂಡಿದ್ದರಿಂದ…

Read More