ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಾಳೆಯದಲ್ಲಿ ಕೋಲಾಹಲ
ದಾವಣಗೆರೆ, ಮಾರ್ಚ್ 10: ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ (Davangere By-election) ಮೊದಲೇ ಕಾಂಗ್ರೆಸ್ (Congress) ಪಾಳೆಯದಲ್ಲಿ ವಿಘ್ನ ಶುರುವಾಗಿದೆ. ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿ ಆಗಿದೆ. ಇನ್ನೇನು ಉಪ ಚುನಾವಣೆ ಘೋಷಣೆ ಆಗಲಿದೆ. ಇದು ಕಾಂಗ್ರೆಸ್ಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ 10 ಜನ ಸಚಿವರ ತಂಡ ಕೂಡ ಮಾಡಲಾಗಿದೆ. ಅಖಾಡ ಸಜ್ಜಾಗುವ ಮೊದಲೇ ಜಮೀರ್ ಮತ್ತು ಮಲ್ಲಿಕಾರ್ಜುನ ನಡುವೆ ಪೈಟ್ ಶುರುವಾಗಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಹತ್ತಾರು ಕಿತ್ತಾಟಗಳ ಮಧ್ಯೆ ಉಪಚುನಾವಣೆ…