ಅಪ್ಪ ಏಳನೇ ಬಾರಿ ಮದುವೆಯಾಗ್ತಿದ್ದಾರೆ ಯಾರಾದ್ರೂ ತಡೀರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ
ಅಹ್ರೌಲಾ, ಮಾರ್ಚ್ 10: ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ. 55 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅವನ ಸ್ವಂತ ಮಗನೇ…