ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್
ಕ್ರಿಕೆಟ್ ಲೋಕದ ಅತ್ಯಂತ ಜಂಟಲ್‌ಮ್ಯಾನ್ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಕಿವೀಸ್ ಆಟಗಾರರು ಕ್ರಿಕೆಟ್ ನಿಯಮಗಳನ್ನು ಮುರಿಯುವುದಾಗಲ್ಲಿ, ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುವುದಾಗಲಿ, ಎದುರಾಳಿ ತಂಡದ ಆಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ನಾವು ನೋಡುವುದು ತೀರ ವಿರಳ. ಹೀಗಾಗಿ ಇಡೀ ವಿಶ್ವ ಕ್ರಿಕೆಟ್ ನ್ಯೂಜಿಲೆಂಡ್ ತಂಡಕ್ಕೆ ಸಲಾಂ ಹೊಡೆಯುತ್ತದೆ. ಅಂತಹದಲ್ಲಿ ಕಿವೀಸ್ ತಂಡದ ಆಟಗಾರನೊಬ್ಬ ಲೈವ್ ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡು ಎದುರಾಳಿ ತಂಡದ ಆಟಗಾರನೊಂದಿಗೆ ವಾಗ್ವಾದಕ್ಕಿಳಿದ ಘಟನೆಯೊಂದು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಡೆದಿದೆ….