ನಾಯಿ ವಾಕಿಂಗ್ ವಿಚಾರಕ್ಕೆ ಹೊಡೆದಾಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ಶ್ವಾನ ಜಗಳ
ಬೆಂಗಳೂರು, (ಮಾರ್ಚ್ 06): ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ, ನೋಡ-ನೋಡ್ತಿದ್ದಂತೆ ಬಡಿದಾಡುವ ಹಂತಕ್ಕೆ ಹೋಗಿದೆ. ವ್ಯಾಯಾಮ ಮಾಡ್ತಿದ್ದ ಏಳೆಂಟು ಜನ ಹಿರಿಯ ನಾಗರೀಕರು(senior citizen) ಏಕಾಏಕಿ ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೆಳಕ್ಕೆ ಉರುಳಿ ಬಿದ್ದರೂ ಸಹ ಬಿಡದೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದಾರೆ. ಈ ಘಟನೆ ಬೆಂಗಳೂರಿನ (Bengaluru) ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೊಪಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದು, ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ಎನ್ನುವರು…