Video: ಸ್ಕ್ಯಾನಿಂಗ್ ಸೆಂಟರ್ನ ಶೌಚಾಲಯದಲ್ಲಿ ಮಗುವಿಗೆ ಜನ್ಮಕೊಟ್ಟು ಕಸದ ಬುಟ್ಟಿಗೆ ಎಸೆದು ಹೋದ ಬಾಲಕಿ – Kannada News | Nagarkurnool: Minor Student Delivers Baby in Scan Center Restroom
ಹೈದರಾಬಾದ್, ಮಾರ್ಚ್04: ಬಾಲಕಿಯೊಬ್ಬಳಿಗೆ ಹತ್ತನೇ ತರಗತಿ ಪರೀಕ್ಷೆ ಬರೆದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್ ಸೆಂಟರ್ಗೆ ಹೋಗಿದ್ದಾಗ ಬಾತ್ರೂಮಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿಯೊಂದಿಗೆ ಸೇರಿ ಮಗುವನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ.ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಬಾಲಕಿ ಯಾರನ್ನಾದರೂ ಪ್ರೇಮಿಸಿ ಮೋಸ ಹೋಗಿದ್ದಳೋ, ಅಥವಾ ಆಕೆಯ ಮೇಲೇನಾದರೂ ಲೈಂಗಿಕ ಕಿರುಕುಳ ನಡೆದಿತ್ತೇ ಎನ್ನುವ ಮಾಹಿತಿ ತಿಳಿದುಬಂದಿಲ್ಲ. …