ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ – Kannada News | India thinks up oil contingency plan to avoid shortage of petrol, diesel, LNG, LPG supply
ನವದೆಹಲಿ, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ತೈಲ ಸಾಗಣೆಗೆ ಅಡ್ಡಿಯಾಗಿರುವುದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ದಟ್ಟವಾಗಿದೆ. ಹಲವು ವಾರಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವುದರಿಂದ ಭಾರತವು ತೈಲ ಸರಬರಾಜು ಅಬಾಧಿತವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿವಿಧ ಕ್ರಮಗಳನ್ನು ಅದು ಯೋಜಿಸಿದೆ. ಪೆಟ್ರೋಲ್ ಮತ್ತು ಡೀಸಲ್ ರಫ್ತನ್ನು ಕಡಿಮೆಗೊಳಿಸುವುದು, ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸುವುದು, ಎಲ್ಪಿಜಿ ರೇಶನ್ ಇತ್ಯಾದಿ ಕ್ರಮಗಳನ್ನು ಭಾರತ ಆಲೋಚಿಸುತ್ತಿದೆ. ಪೆಟ್ರೋಲ್…