ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್ ಪಾಲಿಸಿ
ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ (gas) ಒಲೆಯಲ್ಲಿಯೇ ಅಡುಗೆ ಮಾಡೋದು. ಈ ಗ್ಯಾಸ್ ಒಲೆ ಮತ್ತು ಗ್ಯಾಸ್ ಸಿಲಿಂಡರ್ ಅಡುಗೆ ಮನೆಯ ಅತ್ಯಗತ್ಯ ವಸ್ತು ಅಂತಾನೇ ಹೇಳಬಹುದು. ಈ ಸಿಲಿಂಡರ್‌ಗಳಲ್ಲಿ ಗ್ಯಾಸ್ ಎಷ್ಟು ಮುಗಿಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗದ ಕಾರಣ ಗ್ಯಾಸ್ ಯಾವಾಗ ಖಾಲಿಯಾಗುತ್ತೆ ಅನ್ನೋದನ್ನು ಅಂದಾಜಿಸುವುದೇ ಹಲವರಿಗೆ ಕಷ್ಟದ ಕೆಲಸ. ಗ್ಯಾಸ್ ತನ್ನಿಂದ ತಾನಾಗಿ ಆಫ್ ಆದಾಗಲೇ ಗ್ಯಾಸ್ ಮುಗಿದಿದೆ ಎನ್ನುವುದು ತಿಳಿಯುವುದು. ಹೀಗೆ ಅರ್ಜೆಂಟ್ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್ ಸಿಲಿಂಡಿರ್…