ಹುಬ್ಬಳ್ಳಿ ಜನರೇ ಎಚ್ಚರ… ಹೆಸ್ಕಾಂ ಎಂದು ಹೇಳಿಕೊಂಡು ಮನೆಗೆ ಬರ್ತಾರೆ ನಕಲಿ ಬಿಲ್ ಕಲೆಕ್ಟರ್ – Kannada News | Caught! Hubballi’s Fake HESCOM Collector Nabbed by Alert Public
ಹುಬ್ಬಳ್ಳಿ, ಮಾ.2: ಹುಬ್ಬಳ್ಳಿಯ ಆನಂದ ನಗರದಲ್ಲಿ ವಂಚನೆಯ ವಿಭಿನ್ನ ಹಾದಿ ತುಳಿದಿದ್ದ ಖದೀಮನೊಬ್ಬ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಹೆಸ್ಕಾಂ (HESCOM) ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಕಲೆಕ್ಟರ್‌ನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಈ ಘಟನೆ ನಡೆದಿದೆ. ಖದೀಮನು ಖಾಕಿ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ವಸೂಲಿ ಮಾಡಲು ಬಂದಿರುವುದಾಗಿ ನಂಬಿಸಿದ್ದಾನೆ. ಮನೆ…