Headlines

nagaraj11081993

ಮಾರ್ಚ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ ಕೆಲಸವನ್ನು ಮಾಡಲೇ ಬಾರದು… – Kannada News | March 2026 Scorpio Astrology: Navigate Planetary Transits and Boost Your Luck

ಮಾರ್ಚ್ 2026ರ ಗ್ರಹಗತಿಗಳ ಆಧಾರದ ಮೇಲೆ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿದೆ. ಶನಿ, ಗುರು ಮತ್ತು ರಾಹು-ಕೇತುಗಳ ಸ್ಥಾನಪಲ್ಲಟವು ನಿಮ್ಮ ಜೀವನದ ಮೇಲೆ ವಿಭಿನ್ನ ಪ್ರಭಾವ ಬೀರಲಿದೆ. ​ನಿಮ್ಮ ರಾಶಿಗೆ ಮಾರ್ಚ್ 2026 ರಲ್ಲಿ ಯಾವ ದಶೆಗಳು ಉತ್ತಮ, ಮಧ್ಯಮ ಮತ್ತು ಅಧಮ ಎಂಬುದರ ವಿವರವಿದು. ​ವೃಶ್ಚಿಕ ರಾಶಿ: ಮಾರ್ಚ್ 2026ರ ದಶಫಲ ವಿಶ್ಲೇಷಣೆ ​ಮಾರ್ಚ್ ತಿಂಗಳಲ್ಲಿ ಗ್ರಹಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಸವಾಲು ಮತ್ತು ಅವಕಾಶಗಳೆರಡನ್ನೂ ಸಮಾನವಾಗಿ ನೀಡಲಿದೆ. ​ಉತ್ತಮ ಫಲ ​ಈ…

Read More

ದೆಹಲಿ: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ, ಮೂವರು ಹೆಣ್ಣುಮಕ್ಕಳ ಶವ ಪತ್ತೆ – Kannada News | Delhi Family Murder: Mother and Three Daughters Found Slain, Husband Missing Police Probe

ನವದೆಹಲಿ, ಫೆಬ್ರವರಿ 26: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ ಮತ್ತು ಮೂರು ಹೆಣ್ಣುಮಕ್ಕಳ ಶವ ಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ದೆಹಲಿಯ ಸಮಯಪುರ್ ಬದ್ಲಿಯ ಲೇನ್‌ಗಳಲ್ಲಿನ ಮನೆಯೊಂದರಲ್ಲಿ ಒಂದು ಕೊಲೆ(Murder)ನಡೆದಿದೆ. ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯ ಪತಿ ನಾಪತ್ತೆಯಾಗಿದ್ದಾನೆ. ಚಂದನ್ ಪಾರ್ಕ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ಘಟನೆಯ ರಾತ್ರಿ, ಮಕ್ಕಳ ಕಿರುಚಾಟದಿಂದ ಸ್ವಲ್ಪ ಸಮಯದ ಹಿಂದೆ ಎಚ್ಚರಗೊಂಡಿದ್ದ ಹತ್ತಿರದ…

Read More

6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ – Kannada News | A 6th reserve day is typically allocated for the Ranji Trophy final

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 584 ರನ್​ ಕಲೆಹಾಕಿದೆ. ಇದೀಗ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಶುರು ಮಾಡಿದ್ದು, 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ. ಇದೀಗ (ಫೆ.26) ಮೂರನೇ ದಿನದಾಟ ನಡೆಯುತ್ತಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭಿಕ ಆಘಾತಕ್ಕೆ…

Read More

ಎಂಟು ವಾರಗಳ ವರೆಗೆ ಒಟಿಟಿಯಲ್ಲಿ ಬಿಡುಗಡೆ ಇಲ್ಲ: ಟಾಲಿವುಡ್ ಮಹತ್ವದ ನಿರ್ಧಾರ – Kannada News | Tollywood decided OTT window for Telugu Movies

ಚಿತ್ರಮಂದಿರಕ್ಕೆ (Theater) ಜನ ಬರುತ್ತಿಲ್ಲ, ಸಿನಿಮಾಗಳ ಬಜೆಟ್ ಹೆಚ್ಚಾಗಿದೆ, ನಿರ್ಮಾಪಕರು ನಷ್ಟದಲ್ಲಿದ್ದಾರೆ ಎಂಬ ದೂರುಗಳು ಎಲ್ಲ ಚಿತ್ರರಂಗಗಳಿಂದಲೂ ಕೇಳಿ ಬರುತ್ತಿದೆ. ಪೈರಸಿ, ಸಿನಿಮಾಗಳನ್ನು ಪರೋಕ್ಷವಾಗಿ ಕಾಡಿದರೆ ಒಟಿಟಿಗಳು ನೇರವಾಗಿ ಜನರು ಚಿತ್ರಮಂದಿರಕ್ಕೆ ಬರದಂತೆ ತಡೆಯುತ್ತಿವೆ ಎಂದು ವಿತರಕರು ಕೆಲ ನಿರ್ಮಾಪಕರು ಆರೋಪಿಸುತ್ತಲೇ ಬಂದಿದ್ದಾರೆ. ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆ ಆದ ತಿಂಗಳಿಗೆ ಮುಂಚೆಯೇ ಒಟಿಟಿಗೆ ಬರುವ ಮೂಲಕ ಚಿತ್ರಮಂದಿರಗಳ ಮಾಲೀಕರು, ವಿತರಕರು ನಷ್ಟ ಹೊಂದಿದ ಉದಾಹರಣೆಗಳಿವೆ, ಇದೇ ಕಾರಣಕ್ಕೆ ಇದೀಗ ನೆರೆಯ ತೆಲುಗು ಚಿತ್ರರಂಗ ಮಹತ್ವದ…

Read More

ಭಾರತದಲ್ಲಿ ಚೀನೀ ಸ್ಮಾರ್ಟ್​ಫೋನ್​ಗಳ ಆದಾಯ ಮೊದಲ ಬಾರಿಗೆ ಕುಸಿತ; ಐಫೋನ್, ಸ್ಯಾಮ್ಸುಂಗ್​ಗೆ ಧಕ್ಕೆ ಇಲ್ಲ – Kannada News | Chinese smartphone companies see first ever revenue drop in India

ನವದೆಹಲಿ, ಫೆಬ್ರುವರಿ 26: ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ (chinese smarphone companies) ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್​ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಚೀನೀ ಕಂಪನಿಗಳು ವಾರ್ಷಿಕ ಆದಾಯದಲ್ಲಿ…

Read More

Daily Devotional: ಮೂರು ದಾರಿ ಸೇರುವ ಜಾಗದಲ್ಲಿಟ್ಟ ನಿಂಬೆಹಣ್ಣು ತುಳಿದ್ರೆ ಅಪಾಯನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Crossroads Rituals: Understanding the Beliefs Behind Lemons and Offerings

ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ, ನಿಂಬೆಹಣ್ಣು, ರಂಗೋಲಿ, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ದೀಪಗಳು ಅಥವಾ ಸಣ್ಣ ಮಡಕೆಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೀರಿ. ಇಂತಹ ಸನ್ನಿವೇಶಗಳನ್ನು ನೋಡಿದಾಗ, ಇದು ಶುಭವೇ ಅಥವಾ ಅಶುಭವೇ, ಇದನ್ನು ನೋಡುವುದು ಒಳ್ಳೆಯದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಆಚರಣೆಗಳ ಹಿಂದಿನ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ….

Read More

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್​​: ತಲೆಮರೆಸಿಕೊಂಡ ಸ್ವಯಂ ಘೋಷಿತ ದೇವಮಾನವ? – Kannada News | Self Proclaimed Godman Mallikarjuna Mutya Absconds After POCSO Case Filed

ಮಲ್ಲಿಕಾರ್ಜುನ ಮುತ್ಯಾImage Credit source: Google ಯಾದಗಿರಿ, ಫೆಬ್ರವರಿ 26: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತನೆ ಹಿನ್ನೆಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ….

Read More

Holi Vastu Tips: ಹೋಳಿ ಹಬ್ಬಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ – Kannada News | Holi Vastu Tips: Clear Negativity, Attract Wealth and Luck for New Beginnings

ಹೋಳಿ ಹಬ್ಬವು ಬಣ್ಣಗಳ ಸಂಭ್ರಮ ಮಾತ್ರವಲ್ಲ, ಅದು ಬದುಕಿನಲ್ಲಿ ಹೊಸ ಚೈತನ್ಯವನ್ನು ತುಂಬುವ ಮಹತ್ವದ ಪರಿವರ್ತನೆಯ ಸಮಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಮನೆಯನ್ನು ಕೇವಲ ಹೊರಗಿನಿಂದ ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಮನೆಯೊಳಗೆ ಅಡಗಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುವುದು ಅತ್ಯಗತ್ಯ. ಮನೆಯಲ್ಲಿ ಸಂಗ್ರಹವಾಗಿರುವ ಅನಗತ್ಯ ವಸ್ತುಗಳು ನಮ್ಮ ಏಕಾಗ್ರತೆಯನ್ನು ಕುಗ್ಗಿಸಿ, ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು. ಉದಾಹರಣೆಗೆ, ಮನೆಯಲ್ಲಿ ಒಣಗಿದ ಅಥವಾ ಸತ್ತ ಸಸ್ಯಗಳು ಇರುವುದು ದುಃಖ ಮತ್ತು ಕುಂಠಿತ ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳ…

Read More

ಇಂಗ್ಲೆಂಡ್ ತಂಡ ನಮಗೋಸ್ಕರ ಗೆಲ್ತಾರೆ ಬಿಡಿ..! – Kannada News | England win for us says pakistan captain salman ali agha

T20 World Cup 2026: ಟಿ20 ವಿಶ್ವಕಪ್​ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿ ಫೈನಲ್​ಗೇರಿದರೆ, ಶ್ರೀಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವೆ ಸೆಮಿ ಫೈನಲ್​ ಪೈಪೋಟಿ ಇದೆ. ಅಂದರೆ ಈ ಎರಡು ತಂಡಗಳಲ್ಲಿ ಒಂದು ಟೀಮ್ ಸೆಮಿ ಫೈನಲ್​ಗೇರಲಿದೆ. ಆದರೆ ಇಲ್ಲಿ ಪಾಕಿಸ್ತಾನ್ ತಂಡದ ಸೆಮಿ ಫೈನಲ್​ ಹಾದಿಯನ್ನು ನಿರ್ಧರಿಸುವುದು ಇಂಗ್ಲೆಂಡ್ ತಂಡ ಎಂಬುದು ವಿಶೇಷ. ಅಂದರೆ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಗೆದ್ದರೆ ಮಾತ್ರ ಸೆಮಿ…

Read More

ಕಾಡಾನೆ ದಾಳಿ ಭೀತಿಯಲ್ಲಿರುವ ಚಿಕ್ಕಮಗಳೂರು ನಿವಾಸಿಗಳಿಗೆ ಮತ್ತೊಂದು ಶಾಕ್ – Kannada News | Wild gaur of Over 50 Spotted in Koppa Coffee Estate Amid Elephant Fear in Chikkamagaluru: Video goes viral

ಚಿಕ್ಕಮಗಳೂರು, ಫೆಬ್ರವರಿ 26: ಈಗಾಗಲೇ ಕಾಡಾನೆಗಳ ದಾಳಿಯಿಂದ ಆತಂಕದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಇದೀಗ ಕಾಡುಕೋಣಗಳ ಹಾವಳಿಯೂ ತಲೆನೋವಾಗಿ ಪರಿಣಮಿಸಿದೆ. ಕೊಪ್ಪ ತಾಲೂಕಿನ ಬಸ್ರೀಕಟ್ಟೆ ಗ್ರಾಮದ ಕಾಫಿತೋಟದಲ್ಲಿ 50ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಕಾಫಿತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡುಕೋಣಗಳು ಸಂಚರಿಸುತ್ತಿರುವ ದೃಶ್ಯ ಕಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಕಾಡಾನೆಗಳ ಹಾವಳಿ ಇನ್ನೂ ಕಡಿಮೆಯಾಗದಿರುವಾಗಲೇ ಕಾಡುಕೋಣಗಳ ದಾಳಿ ಭೀತಿ ಹೆಚ್ಚಾಗಿದೆ. ಇತ್ತೀಚೆಗೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ 55 ವರ್ಷದ ರೈತ…

Read More