ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್ – Kannada News | Donald Trump says tariffs paid by foreign countries will ease IT burden of Americans
ವಾಷಿಂಗ್ಟನ್, ಫೆಬ್ರುವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅಲ್ಲಗಳೆಯುವುದನ್ನು ಮುಂದುವರಿಸಿದ್ದಾರೆ. ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಅವರು, ಕೋರ್ಟ್ ತೀರ್ಪು ಬಹಳ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅಮೆರಿಕದ ಜೊತೆ ಮಾಡಿಕೊಂಡಿರುವ ಒಪ್ಪಂದಗಳಿಂದ ಸಂತುಷ್ಟಗೊಂಡಿವೆ ಎಂದು ಟ್ರಂಪ್ ಹಂಗಿಸಿದ್ದಾರೆ. ‘ನಮ್ಮನ್ನು ಹೀನಾಯವಾಗಿ ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅವರು ಖುಷಿಯಾಗಿದ್ದಾರೆ. ನಾವೂ ಖುಷಿಯಾಗಿದ್ದೇವೆ….