ತೆಲಂಗಾಣದ ದೇವಸ್ಥಾನದ ಜಾತ್ರೆಯಲ್ಲಿ ಜಾತಿ ಸಂಘರ್ಷ; ಕೂದಲೆಳೆದು ಮಹಿಳೆಯರಿಗೆ ಥಳಿತ, ಮಗು ಸಾವು – Kannada News | Women Attacked in Caste Clash at Telangana Temple Fair 2 month old baby died
ಹೈದರಾಬಾದ್, ಫೆಬ್ರವರಿ 23: ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿ ನಡೆದ ಕುಮ್ಮೇರ ಜಾತ್ರೆಯ ಸಂದರ್ಭದಲ್ಲಿ ಜಾತಿ ಘರ್ಷಣೆಯಲ್ಲಿ ಒಂದು ಕುಟುಂಬದ ಮೇಲೆ ಪುರುಷರ ಗುಂಪೊಂದು ದಾಳಿ ನಡೆಸಿದೆ. ಈ ಗಲಾಟೆಯಲ್ಲಿ 2 ತಿಂಗಳ ಮಗುವೂ ಸಾವನ್ನಪ್ಪಿದೆ. ಕೆಳ ಜಾತಿಯ ಮಹಿಳೆಯರ ಕೂದಲನ್ನು ಎಳೆದು ರಾಡ್‌ಗಳಿಂದ ಹೊಡೆಯಲಾಗಿದೆ. ಜಾತ್ರೆಗೆ ದೇವಾಲಯದೊಳಕ್ಕೆ ಪ್ರವೇಶಿಸಲು ಕೆಳ ಜಾತಿಯ ಕುಟುಂಬಸ್ಥರು 100 ರೂ. ನೀಡಲು ನಿರಾಕರಿಸಿದಾಗ ವಾಗ್ವಾದ ಪ್ರಾರಂಭವಾಯಿತು. ಇದೇ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿತು. ಇದಾದ ನಂತರ ಆ ಕುಟುಂಬದ ಸದಸ್ಯರು ಪೊಲೀಸ್ ದೂರು ದಾಖಲಿಸಿದರು….