ಚಿಕ್ಕಮಗಳೂರು: ಪ್ರತಿಭಟಿಸಿದ 29ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್, ಲಾಠಿಚಾರ್ಜ್ ಖಂಡಿಸಿ 3 ತಾಲೂಕು ಬಂದ್ಗೆ ಕರೆ – Kannada News | Chikkamagaluru Tense After Wild Elephant Attack: FIR Against 29 Protesters, Three Taluks Call for Bandh Over Lathi Charge
ಚಿಕ್ಕಮಗಳೂರು, ಫೆಬ್ರವರಿ 23: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬೋರಮ್ಮ ಮೃತಪಟ್ಟ ನಂತರದ ಬೆಳವಣಿಗೆಗಳು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿವೆ. ಸಾರ್ವಜನಿಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಲಾಠಿಚಾರ್ಜ್ ಘಟನೆ ನಡೆದಿದೆ. ಬಾಳೆಹೊನ್ನೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆ ನಡೆಸಿದ 29ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಾಗಿವೆ. ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನಗಳನ್ನು ಪಲ್ಟಿ ಮಾಡುವ ಯತ್ನ, ಮತ್ತು ರಸ್ತೆ ತಡೆ ನಡೆಸಿದ ಆರೋಪದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಈ ಘಟನೆಗಳಲ್ಲಿ…