‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್ಗೆ ಪ್ರಧಾನಿ ಮೋದಿ ತರಾಟೆ – Kannada News | PM Narendra Modi slams congress party’s shirtless protest, says you are already naked
ನವದೆಹಲಿ, ಫೆಬ್ರುವರಿ 22: ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಕೆಲ ಯುವ ಕಾಂಗ್ರೆಸ್ ನಾಯಕರು ಶರ್ಟ್ ಬಿಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ನ ಕೊಳಕು ಮತ್ತು ಬೆತ್ತಲೆ ರಾಜಕಾರಣ, ಹಾಗೂ ಆ ಪಕ್ಷ ತಾತ್ವಿಕವಾಗಿ ಅದೆಷ್ಟು ದಿವಾಳಿ ಎದ್ದಿದೆ ಎಂಬುದನ್ನು ಈ ಪ್ರತಿಭಟನೆ ಸಾಕ್ಷ್ಯವಾಗಿದೆ ಎಂದು ಪ್ರಧಾನಿಗಳು ವಿಷಾದಿಸಿದ್ದಾರೆ. ದೆಹಲಿ ಸಮೀಪದ ಮೀರತ್ ನಗರದಲ್ಲಿ ಇಂದು ನಡೆದ ಮೆಟ್ರೋ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ನೀವು…